ಪೋಕ್ಸೋ ಕಾಯ್ದೆಯಡಿ ಮೊದಲ ಗಲ್ಲು ಶಿಕ್ಷೆಯ ತೀರ್ಪು
ಗುವಾಹಟಿ : 2019 ಮತ್ತು 2022 ರ ನಡುವೆ ನಾಲ್ಕು ವರ್ಷಗಳ ಕಾಲ ಎಂಟು ಹುಡುಗರು ಮತ್ತು 13 ಹುಡುಗಿಯರು 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ವಸತಿ ಶಾಲೆಯ ಮಾಜಿ ಹಾಸ್ಟೆಲ್ ವಾರ್ಡನ್ ಯುಮ್ಕೆನ್ ಬಾಗ್ರಾಗೆ ಅರುಣಾಚಲ ಪ್ರದೇಶದ ವಿಶೇಷ ಪೋಕ್ಸೊ ನ್ಯಾಯಾಲಯ ಗುರುವಾರ ಮರಣದಂಡನೆ ವಿಧಿಸಿದೆ.ದೌರ್ಜನ್ಯ ಉಂಟಾದ ಸಮಯದಲ್ಲಿ ಹುಡುಗಿಯರು ಆರರಿಂದ 15 ವರ್ಷ ವಯಸ್ಸಿನವರು ಮತ್ತು ಹುಡುಗರು ಏಳು ರಿಂದ 16 ವರ್ಷ ವಯಸ್ಸಿನವರಾಗಿದ್ದರು. ಸಂತ್ರಸ್ತರಲ್ಲಿ ನಾಲ್ವರು ಆತ್ಮಹತ್ಯೆಗೂ ಯತ್ನಿಸಿದ್ದರು.