ಮುಖ್ಯಮಂತ್ರಿ ಸಿದ್ದರಾಮ್ಯಯ ಅಂದ್ರೆ ಪರ್ಫೆಕ್ಟ್. ಲೆಕ್ಕ, ಅಂಕಿ-ಅಂಶದಲ್ಲಿ ಸಿಎಂ ಸಿದ್ದರಾಮಯ್ಯ ಪರ್ಫೆಕ್ಟ್ ಎಂದು ರಾಜ್ಯ ರಾಜಕಾರಣಲ್ಲಿ ಎಲ್ಲರಿಗೂ ಗೊತ್ತಿರುವ ವಿಷಯ. ಈ ಅಂಕಿ-ಅಂಶದಲ್ಲಿ ಸಿಎಂ ಹಲವು ಬಾರಿ ತಾವು ಪರ್ಫೆಕ್ಟ್ ಎಂದು ಸಾಬೀತು ಮಾಡಿದ್ದುಂಟು, ಅದಕ್ಕಾಗಿ ಅವರನ್ನು ಲೆಕ್ಕರಾಮಯ್ಯ ಅಂತಲೂ ಕರೆಯುತ್ತಾರೆ.ಇದೀಗ ಮತ್ತೊಮ್ಮೆ ತಮ್ಮ ಅಂಕಿ-ಅಂಶ ಪರ್ಫೆಕ್ಟ್ ಎಂದು ಸಾಬೀತುಪಡಿಸಿದ್ದಾರೆ.
ಕೊಪ್ಪಳ, (ಸೆಪ್ಟೆಂಬರ್ 22): ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಇಂದು ತುಂಗಭದ್ರಾ ಜಲಾಶಯ ಗೇಟ್ ದುರಸ್ತಿ ಮಾಡಿದವರಿಗೆ ಸರ್ಕಾರದಿಂದ ಸತ್ಕಾರ ಮಾಡಲಾಯಿತು. ಮುನಿರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಭಾಷಣದ ವೇಳೆ ಅಧಿಕಾರಿಗಳು, ಸಚಿವರು, ಶಾಸಕರ ಮೇಲೆ ಗರಂ ಆದ ಘಟನೆ ನಡೆಯಿತು. ಜೊತೆಗೆ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಲೆಕ್ಕದಲ್ಲಿ ಪರ್ಫೆಕ್ಟ್ ಎಂದು ಮತ್ತೊಮ್ಮೆ ಸಾಬೀತು ಪಡಿಸಿದರು.ತುಂಗಭದ್ರ ಅಣೆಕಟ್ಟೆಯಿಂದ ಯಾವ ರಾಜ್ಯದ ಎಷ್ಟು ಎಕರೆ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ ಎನ್ನುವ ಬಗ್ಗೆ ಅಂಕಿ ಅಂಶ ಸಮೇತ ವಿವರಿಸಿದರು. ಎಡ ಮತ್ತು ಬಲ ದಂಡೆಯಲ್ಲಿ ಎಷ್ಟೆಷ್ಟು ಎಕರೆಗೆ ನೀರುಣಿಸಲಾಗುತ್ತಿದೆ ಎನ್ನುವ ಅಂಕಿ ಅಂಶ ಕೂಡ ಹೇಳಿದರು. ಈ ವೇಳೆ ವೇದಿಕೆಯಲ್ಲಿದ್ದ ಕೆಲವರು ಬೇರೆ ಅಂಕಿ ಅಂಶ ಹೇಳಿ ಅವರನ್ನು ತಿದ್ದಲು ಯತ್ನಿಸಿದರು. ಆದರೆ, ಎಲ್ಲರು ಕೊಟ್ಟ ಅಂಕಿ ಅಂಶಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಬಳಿಕ ಇಲಾಖೆ ಮುಖ್ಯಸ್ಥರನ್ನು ಕರೆದು ದಾಖಲೆ ತರಿಸಿಕೊಂಡರು. ದಾಖಲೆಗಳ ಪ್ರಕಾರ ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದ ಅಂಕಿ ಅಂಶಗಳು, ಕೊಟ್ಟ ಲೆಕ್ಕವೇ ಸರಿಯಾಗಿತ್ತು. ಬಳಿಕ ಮುಖ್ಯಮಂತ್ರಿಗಳು ಸಭಿಕರ ಕಡೆಗೆ ಥಂಬ್ಸ್ ಅಪ್ ತೋರಿಸಿ ನನ್ನ ಲೆಕ್ಕವೇ ಪರ್ಪೆಕ್ಟ್ ಎಂದರು. ಇದಕ್ಕೆ ನೆರದಿದ್ದ ಜನರು ಶಿಳ್ಳೆ ಹಾಕಿ ಸಂಭ್ರಮಿಸಿದರು. ನಾನು ಹೇಳಿದ್ದೆ ಸರಿಯಾಗಿದೆ, ತಪ್ಪಾಗಿ ಮಾಹಿತಿ ನೀಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಹೇಳಿದರು.