ಬೀದರ್ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾದ 14 ಸೈಟ್ಗಳನ್ನು ವಾಪಸ್ಸು ನೀಡಿದ್ದಾರೆ. ಈ ವಿಚಾರವಾಗಿ ಬೀದರ್ ನಲ್ಲಿ ಬಿಜೆಪಿ ಶಾಸಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು,ಇಡೀ ದೇಶದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ಸಿನ ಬೆನ್ನೆಲುಬಾಗಿದ್ದಾರೆ.
ಹಾಗಾಗಿ ಎಲ್ಲಿ ಅವರು ರಾಜೀನಾಮೆ ಕೊಟ್ಟರೆ ಕಾಂಗ್ರೆಸ್ ಮುಳುಗುತ್ತದೆ ಎಂದು ಭಯದಲ್ಲಿ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೀದರ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದೆ ಎಂದು ಬೀದರ್ ನಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗಾರ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಕಾಂಗ್ರೆಸ್ ಗೆ ಮುಳುಗುವ ಭಯ ಶುರುವಾಗಿದೆ. ಇಡೀ ದೇಶದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಬೆನ್ನೆಲುಬು ಆಗಿದ್ದಾರೆ ಎಂದು ತಿಳಿಸಿದರು.
ಮಾನ, ಮರ್ಯಾದೆ, ಇಲ್ಲದವರು, ನೀತಿಗೆಟ್ಟವರು ಸಿದ್ದರಾಮಯ್ಯ ಬೆನ್ನಿಗಿದ್ದಾರೆ. 65 ಕೋಟಿ ಕೊಟ್ರೆ ಸೈಟ್ ವಾಪಸ್ ಕೊಡ್ತೀನಿ ಅಂತ ಸಿಎಂ ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಜನರಿಗೆ ಎಮೋಷನಲ್ ಬ್ಲಾಕ್ ಮೇಲ್ ಮಾಡಲು ಪತ್ನಿಯವರಿಂದ ಪತ್ರ ಬರೆಸಿದ್ದೀರಿ ಎಂದು ಬಸವಕಲ್ಯಾಣ ಬಿಜೆಪಿ ಶಾಸಕ ವಾಗ್ದಾಳಿ ನಡೆಸಿದ್ದಾರೆ.
ಇಡಿ ಭಯದಿಂದ ನನ್ನ ಹೆಂಡತಿ ತಪ್ಪು ಮಾಡಿದ್ದಾರೆ. ಹಾಗಾಗಿ ಶಿಕ್ಷೆ ಬೇಕಾದರೆ ಅವಳಿಗೆ ಕೊಡಿ. ನಾನು ಬೇಕಾದರೆ ಸಿಎಂ ಸ್ಥಾನದಲ್ಲಿ ಉಳಿಯುಬೇಕು ಎನ್ನುವ ಪ್ರಯತ್ನ ಸಿದ್ದರಾಮಯ್ಯ ಮಾಡಿದ್ದಾರೆ. ನಿಮ್ಮ ಇಡೀ ರಾಜಕಾರಣದ ಬದುಕು ಏನಾದರೂ ಪೂರ್ಣ ಆಗಬೇಕು ಎಂದರೆ ಈ ರಾಜ್ಯದ ಜನ ಮತ್ತೆ ಸಿದ್ದರಾಮಯ್ಯ ಅಂತ ಕರೆಯಬೇಕು ಅಂತ ಅಂದರೆ ನೀವು ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು