ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಕನ್ನಡ ಸಾಹಿತಿ ದೇವನೂರು ಮಹಾದೇವ ಅವರು ವೈಕಂ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2024 ರ ಮೊದಲ ವೈಕಂ ಪ್ರಶಸ್ತಿ ಕನ್ನಡ ಸಾಹಿತ್ಯಲೋಕದ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರಿಗೆ ಲಭಿಸಿರುವುದು ದ್ರಾವಿಡ ನೆಲದ ಮೂಲ ಆಶಯಕ್ಕೆ ಗೌರವ ತಂದಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಪೆರಿಯಾರ್ ಹಾಗು ಅಂಬೇಡ್ಕರ್ ಅವರ ಸೈದ್ಧಾಂತಿಕ ನಿಲುವಿನ ಆಶಯದಲ್ಲಿ ಸಾಗುತ್ತಿರುವ ತಮಿಳುನಾಡು ಮತ್ತು ಕೇರಳ ಸರ್ಕಾರ ಈ ಪ್ರಶಸ್ತಿ ಪ್ರದಾನ ಮಾಡಿರುವುದು ಹೆಮ್ಮೆಯ ಸಂಗತಿ.
ಪ್ರಶಸ್ತಿ ನೀಡಿರುವ ಉದ್ದೇಶ:
ಸರಿಸುಮಾರು ನೂರು ವರ್ಷಗಳ ಹಿಂದೆ ಕೇರಳದ ವೈಕಂ ನಲ್ಲಿ ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಧಾರ್ಮಿಕ ಮೂಲಭೂತವಾದಿಗಳು. ವೈಕಂ ನ ಐತಿಹಾಸಿಕ ಶಿವನ ದೇವಸ್ಥಾನಕ್ಕೆ ದಲಿತರು ಎನ್ನಿಸಿಕೊಂಡಿರುವ ಅಸ್ಪೃಶ್ಯರು ದೇವಸ್ಥಾನದ ಪ್ರವೇಶಿಸದಂತೆ ನಿಷೇದ ಹೇರಲಾಗಿತ್ತು.ಈ ಅಮಾನವೀಯ ಪದ್ದತಿಯನ್ನು ವಿರೋಧಿಸಿ ನಾರಾಯಣ ಗುರು, ಪೆರಿಯಾರ್ ಅವರನ್ನೂ ಒಳಗೊಂಡಂತೆ ಸಂಘಟನಾತ್ಮಕ ಹೋರಾಟ ಕೈಗೊಳ್ಳಾಗಿತ್ತು. ಈ ಹೋರಾಟಕ್ಕೆ ನೂರು ವರ್ಷ ತುಂಬಿರುವ ಜ್ಞಾಪಕಾರ್ಥಕವಾಗಿ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದೇ ನಿಲುವನ್ನು ಪ್ರಸ್ತುತಪಡಿಸುತ್ತಿರುವ ಬಂಡಾಯ ಸಾಹಿತಿ ದೇವನೂರು ಮಹಾದೇವ ಅವರಿಗೆ. ತಮಿಳುನಾಡು ಸರ್ಕಾರ ‘ವೈಕಂ’ ಎನ್ನುವ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿದೆ.
12/12/2024 ನೇ ಗುರುವಾರ ಕೇರಳದ ವೈಕಂ ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಕ್ರಮಕ್ಕೂ ಮುನ್ನ ಪೆರಿಯಾರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ. ನಂತರ ಪೆರಿಯಾರ್ ಜೀವನ, ಚಳುವಳಿ ಮತ್ತು ಹೋರಾಟದ ಚಿತ್ರಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ಉದ್ಘಾಟಿಸಿ. ದೇವನೂರು ಮಹಾದೇವ ಅವರಿಗೆ ವೈಕಂ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.