ಲಾಲ್ ಸಲಾಂ ಡಿಯರ್ Comrade
ಸೀತಾರಾಮ್ ಯೆಚೂರಿ ನಿಧನ ವಾರ್ತೆ ಕುರಿತಾದ ಬರಹ By: Suman Babu ಇಂತಹದ್ದೊಂದು ವಿಷಯಕ್ಕೆ ಸುದ್ದಿ ಬರೆಯುವ ಸಮಯ ಇಷ್ಟು ಬೇಗ ಬರುತ್ತದೆ ಎಂದು ಊಹಿಸಿರಲಿಲ್ಲ. ಆದರೂ ಮೈ- ಕೈ ನಡುಗುತ್ತಿದೆ. ಪಾಪ ಈ ಹಿರಿ ಜೀವ, ನಮ್ಮ ನೆಲದ ಶೋಷಿತರ, ನಿರ್ಗತಿಕರ ಜೀವನ ಹಸನು ಮಾಡಲು. ಜೀವನದ ಕೊನೆಯವರೆಗೂ ವಿರೋಧಪಕ್ಷದ ಸ್ಥಾನದ ರಾಜ್ಯಸಭೆಯ ಅಂಗಳದಲ್ಲಿ ಅದೆಷ್ಟು ಸೆಣೆಸಾಡುತ್ತಿದ್ದರು. ಅವರ ಸೈದ್ಧಾಂತಿಕ ನಿಲುವು, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅಪಾರವಾದ ಜ್ಞಾನದ ಜೊತೆಗೆ ಇಂಗ್ಲಿಷ್- ಹಿಂದಿ ಭಾಷೆಯಲ್ಲಿನ ಸ್ಪಷ್ಟತೆ…