ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕೇಸ್ ಸದ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಸುರುಳಿಯಂತೆ ಸುತ್ತಿಕೊಂಡಿದೆ. ಈ ಬಗ್ಗೆ ಮೊದಲ ಬಾರಿಗೆ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಮಾತನಾಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ಅಣ್ಣ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ನನ್ನಣ್ಣ ರಾಜಕೀಯದಲ್ಲಿ ಹಲವು ವರ್ಷಗಳನ್ನು ಕಳೆದಿದ್ದಾರೆ. ಇಷ್ಟೂ ವರ್ಷವೂ ಅವರ ಮೇಲೆ ಯಾವುದೇ ಕಳಂಕವಿಲ್ಲ. ಈಗ ಅವರ ಮೇಲೆ ಸುಖಾಸುಮ್ಮನೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಮುಡಾ ಕೇಸ್ ಬಗ್ಗೆ ನನಗೆ ಅಷ್ಟೇನೂ ಗೊತ್ತಿಲ್ಲ. ಈ ನಿವೇಶನಗಳ ವಿಚಾರವು ನಮ್ಮ ಅತ್ತಿಗೆಯವರಿಗೆ ಗೊತ್ತಿರಬಹುದು. ಅದೂ ಕೂಡ ಸ್ಪಷ್ಟವಾಗಿ ನನಗೂ ಗೊತ್ತಿಲ್ಲ ಎಂದಿದ್ದಾರೆ.
ಈ ನಿವೇಶನಗಳ ವಿಚಾರವು ನಮ್ಮ ಅಣ್ಣನಿಗೆ ಗೊತ್ತಿರಲಿಲ್ಲ ಅನಿಸುತ್ತೆ. ಈಗೇನೋ ಸೈಟ್‌ಗಳನ್ನು ವಾಪಸ್ ಕೊಡುತ್ತಿದ್ದಾರಂತೆ. ಸೈಟ್‌ಗಳನ್ನೇ ವಾಪಸ್ ಕೊಟ್ಟ ಮೇಲೆ ಅವರ ರಾಜೀನಾಮೆ ಕೇಳುವುದರಲ್ಲಿ ಅರ್ಥವೇ ಇಲ್ಲ. ನನ್ನ ಅಣ್ಣನ ರಾಜಕೀಯ ವಿರೋಧಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಂದಲೇ ಈ ಕಳಂಕ ಬಂದಿದೆ. ನನ್ನ ಅಣ್ಣನನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಸಂಚು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.