ಸ್ಪಿನ್ ಮಾಂತ್ರಿಕ ಮುರಳೀಧರನ್ ದಾಖಲೆ ಸರಿಗಟ್ಟಿದ ಅಶ್ವಿನ್

ಕಾನ್ಪುರ: ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಎರಡೂ ಪಂದ್ಯಗಳಲ್ಲೂ ಗಮನಾರ್ಹ ಪ್ರದರ್ಶನ ನೀಡಿರುವ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ.

ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸರಣಿಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾದ ಆಟಗಾರರ ಪೈಕಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಶ್ವಿನ್ 11ನೇ ಸಲ ಸರಣಿಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸರಣಿಶ್ರೇಷ್ಠ ಪ್ರಶಸ್ತಿ ಸಾಧನೆ:

ಮುತ್ತಯ್ಯ ಮುರಳೀಧರನ್: 11 (ಶ್ರೀಲಂಕಾ)

ರವಿಚಂದ್ರನ್ ಅಶ್ವಿನ್: 11 (ಭಾರತ)

ಜಾಕ್ ಕಾಲಿಸ್: 9 (ದಕ್ಷಿಣ ಆಫ್ರಿಕಾ)

ಸರ್ ರಿಚರ್ಡ್ ಹಾಡ್ಲಿ: 8 (ನ್ಯೂಜಿಲೆಂಡ್)

ಇಮ್ರಾನ್ ಖಾನ್: 8 (ಇಮ್ರಾನ್ ಖಾನ್)

ಇನ್ನು ಭಾರತೀಯರ ಪೈಕಿ ಅಶ್ವಿನ್ ನಂತರದ ಸ್ಥಾನದಲ್ಲಿ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಇದ್ದಾರೆ.

  • ರವಿಚಂದ್ರನ್ ಅಶ್ವಿನ್: 11
  • ವೀರೇಂದ್ರ ಸೆಹ್ವಾಗ್: 5
  • ಸಚಿನ್ ತೆಂಡೂಲ್ಕರ್: 5
  • ಕಪಿಲ್ ದೇವ್: 4
  • ಹರಭಜನ್ ಸಿಂಗ್: 4
  • ರಾಹುಲ್ ದ್ರಾವಿಡ್: 4
  • ಮೊಹಮ್ಮದ್ ಅಜರುದ್ದೀನ್: 3
  • ಜಹೀರ್ ಖಾನ್: 3
  • ವಿರಾಟ್ ಕೊಹ್ಲಿ: 3
  • ಸೌರವ್ ಗಂಗೂಲಿ: 3
  • ಇಶಾಂತ್ ಶರ್ಮಾ: 3

ಬಾಂಗ್ಲಾದೇಶದ ವಿರುದ್ಧ ಚೆನ್ನೈಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಆರು ವಿಕೆಟ್ ಸಾಧನೆ ಮಾಡಿದ್ದ ಅಶ್ವಿನ್, ಕಾನ್ಪುರದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ ಗಳಿಸಿದ್ದರು.

See also  ಕ್ರಿಕೆಟ್ ಗೆ 'ಡ್ವೇನ್ ಬ್ರಾವೋ' ನಿವೃತ್ತಿ ಘೋಷಣೆ
0 0 votes
Article Rating
Subscribe
Notify of
guest
0 Comments
Inline Feedbacks
View all comments