ದೈವತ್ವದಿಂದ ಒತ್ತಡ ನಿಭಾಯಿಸಿ ಎಂದ ನಿರ್ಮಲಾ ಸೀತಾರಾಮನ್

ಚೆನ್ನೈ: ದೇಶಾದ್ಯಂತ ಸುದ್ದಿ ಮಾಡುತ್ತಿರುವ 26 ವರ್ಷದ ಚಾರ್ಟೆಡ್ ಅಕೌಂಟೆಂಟ್ ಸಾವು ಪ್ರಕರಣದ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.

Ernst & Young ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ಕೆಲಸದ ಒತ್ತಡದಿಂದ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಚೆನ್ನೈ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಈ ಸಾವಿನ ಬಗ್ಗೆ ಯಾವುದೇ ಹೆಸರನ್ನು ಉಲ್ಲೇಖಿಸದೇ ಮಾತನಾಡಿದ್ದು, ಒತ್ತಡಗಳನ್ನು ನಿರ್ವಹಿಸುವ ಆಂತರಿಕ ಶಕ್ತಿಯನ್ನು ಜನರು ಗಳಿಸಿಕೊಳ್ಳಲು ಸಾಧ್ಯವಿರುವುದು ದೈವತ್ವದ ಮೂಲಕ ಮಾತ್ರ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಈ ಹೇಳಿಕೆಯನ್ನು ನೆಟ್ಟಿಗರು ಹಾಗೂ ವಿಪಕ್ಷಗಳ ಹಲವು ನಾಯಕರು, ಸಂವೇದನಾರಹಿತ ಹೇಳಿಕೆ ಎಂದು ಆರೋಪಿಸಿದ್ದಾರೆ. “ನಮ್ಮ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಕಾಲೇಜು, ವಿಶ್ವವಿದ್ಯಾನಿಲಯಗಳಿಗೆ ಹೋಗುತ್ತಾರೆ ಮತ್ತು ಅಗಾಧ ಗೆಲುವು, ಅಥವಾ ಯಶಸ್ಸಿನೊಂದಿಗೆ ಹೊರಬರುತ್ತಾರೆ, ಕಂಪನಿ, ಇದು ಪಾಲುದಾರಿಕೆಯಾಗಿದೆ, ಅಲ್ಲಿ ಕೆಲಸ ಮಾಡುತ್ತಿದ್ದ ಸಿಎಯನ್ನು ಚೆನ್ನಾಗಿ ಓದಿದ್ದ ಯುವತಿ (ಕೆಲಸದ ಒತ್ತಡವನ್ನು ತಾಳಲಾರದೆ) ಎರಡು-ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದ ಸುದ್ದಿಯನ್ನು ನಾವು ಸ್ವೀಕರಿಸಿದ್ದೇವೆ – ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಆಕೆ ಮೃತಪಟ್ಟಿದ್ದಾಳೆ” ಎಂದು ತಮ್ಮ ಭಾಷಣದಲ್ಲಿ ಸೀತಾರಾಮನ್ ಹೇಳಿರುವುದು ದಾಖಲಾಗಿದೆ. “ನೀವು ಯಾವುದೇ ವಿಷಯವನ್ನು ಅಧ್ಯಯನ ಮಾಡಿ ಮತ್ತು ನೀವು ಮಾಡುವ ಕೆಲಸ ಯಾವುದೇ ಇರಲಿ. ಅಲ್ಲಿನ ಒತ್ತಡವನ್ನು ನಿಭಾಯಿಸಲು ನೀವು ಆಂತರಿಕ ಶಕ್ತಿಯನ್ನು ಹೊಂದಿರಬೇಕು ಮತ್ತು ಇದನ್ನು ದೈವತ್ವದ ಮೂಲಕ ಮಾತ್ರ ಸಾಧಿಸಬಹುದು ಎಂಬುದನ್ನು ಕುಟುಂಬಗಳು ಕಲಿಸಬೇಕು ಎಂದು ಸೀತಾರಾಮನ್ ಹೇಳಿದ್ದಾರೆ. “ದೇವರಲ್ಲಿ ನಂಬಿಕೆ ಇಡಿ, ನಮಗೆ ದೇವರ ಅನುಗ್ರಹ ಬೇಕು. ದೇವರನ್ನು ಹುಡುಕಿ, ಉತ್ತಮ ಶಿಸ್ತನ್ನು ಕಲಿಯಿರಿ. ಇದರಿಂದ ಮಾತ್ರ ನಿಮ್ಮ ಆತ್ಮಶಕ್ತಿ ಬೆಳೆಯುತ್ತದೆ. ಆತ್ಮಶಕ್ತಿ ಬೆಳೆಯುವುದರೊಂದಿಗೆ ಮಾತ್ರ ಆಂತರಿಕ ಶಕ್ತಿ ಬರುತ್ತದೆ” ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಶಿಕ್ಷಣ ಸಂಸ್ಥೆಗಳು ದೈವತ್ವ ಮತ್ತು ಆಧ್ಯಾತ್ಮಿಕತೆಯನ್ನು ಕಲಿಕೆಯಲ್ಲಿ ತರಬೇಕು. ಆಗ ಮಾತ್ರ ನಮ್ಮ ಮಕ್ಕಳಿಗೆ ಆಂತರಿಕ ಶಕ್ತಿ ಬರುತ್ತದೆ, ಅದು ಅವರ ಮತ್ತು ದೇಶದ ಪ್ರಗತಿಗೆ ಸಹಾಯ ಮಾಡುತ್ತದೆ. ಅದು ನನ್ನ ಬಲವಾದ ನಂಬಿಕೆ, “ಎಂದು ಸಚಿವರು ಹೇಳಿದ್ದಾರೆ.

See also  HSRP ನಂಬರ್‌ ಪ್ಲೇಟ್‌: 3 ದಿನ ದಂಡ ವಿಧಿಸದಿರಲು ಸಾರಿಗೆ ಇಲಾಖೆ ನಿರ್ಧಾರ
0 0 votes
Article Rating
Subscribe
Notify of
guest
0 Comments
Inline Feedbacks
View all comments