ದೈವತ್ವದಿಂದ ಒತ್ತಡ ನಿಭಾಯಿಸಿ ಎಂದ ನಿರ್ಮಲಾ ಸೀತಾರಾಮನ್
ಚೆನ್ನೈ: ದೇಶಾದ್ಯಂತ ಸುದ್ದಿ ಮಾಡುತ್ತಿರುವ 26 ವರ್ಷದ ಚಾರ್ಟೆಡ್ ಅಕೌಂಟೆಂಟ್ ಸಾವು ಪ್ರಕರಣದ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. Ernst & Young ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ಕೆಲಸದ ಒತ್ತಡದಿಂದ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚೆನ್ನೈ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಈ ಸಾವಿನ ಬಗ್ಗೆ ಯಾವುದೇ ಹೆಸರನ್ನು ಉಲ್ಲೇಖಿಸದೇ ಮಾತನಾಡಿದ್ದು, ಒತ್ತಡಗಳನ್ನು ನಿರ್ವಹಿಸುವ ಆಂತರಿಕ ಶಕ್ತಿಯನ್ನು ಜನರು ಗಳಿಸಿಕೊಳ್ಳಲು…