ರಾಜ್ಯ ಸರ್ಕಾರದಿಂದ `ಮಹಿಳೆ’ಯರಿಗೆ ಸಿಗಲಿದೆ 3 ಲಕ್ಷ ರೂ. ಸಾಲ : ಉದ್ಯೋಗಿನಿ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು : ರಾಜ್ಯ ಸರ್ಕಾ ರವು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಉದ್ಯೋಗಿನಿ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನಿಸಿದ್ದು, ಅರ್ಜಿದಾರರು ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗಿಯು ಕರ್ನಾಟಕ ಸರ್ಕಾರದಿಂದ ಮಂಜೂರಾದ ವಿನೂತನ ಯೋಜನೆಯಾಗಿದ್ದು, ಮಹಿಳೆಯರಿಗೆ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಲು ಸಹಾಯ ಮಾಡುತ್ತದೆ, ಮುಖ್ಯವಾಗಿ ವ್ಯಾಪಾರ ಮತ್ತು ಸೇವಾ…

Read More

ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ: ಯೆಲ್ಲೋ ಅಲರ್ಟ್‌ ಘೋಷಣೆ!

ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಆಗಲಿದ್ದು, ಹಲವೆಡೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ದಾವಣಗೆರೆ, ತುಮಕೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕಲಬುರಗಿ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿಯಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಚಿಕ್ಕಮಗಳೂರು,…

Read More

43 ಅಂಗನವಾಡಿ ಕಾರ್ಯಕರ್ತೆಯರು, 94 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ

ಬಳ್ಳಾರಿ: ಸಿರುಗುಪ್ಪ ಮತ್ತು ಕಂಪ್ಲಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಪುರಸಭೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 43 ಅಂಗನವಾಡಿ ಕಾರ್ಯಕರ್ತೆಯರು ಮತ್ತು 94 ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 04 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಅಥವಾ ದೂ.08396-220203 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ…

Read More

ರಾಜ್ಯದ ರೈತರ ಮಕ್ಕಳಿಗೆ ಮುಖ್ಯ ಮಾಹಿತಿ : ‘ಕೃಷಿ ಡಿಪ್ಲೊಮಾ’ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಪ್ರಸಕ್ತ (2024-25) ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 14 ರ ವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 14 ರೊಳಗೆ ಸಲ್ಲಿಸಬಹುದಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ, ಕನಿಷ್ಠ ಶೇ.45 (ಕನಿಷ್ಠ ಶೇ.40 ಪ.ಜಾ ಮತ್ತು ಪ.ಪಂ/ಪ್ರವರ್ಗ-1) ಅಂಕಗಳೊಂದಿಗೆ ಉತ್ತಿರ್ಣರಾದ, 19 ವರ್ಷ ವಯಸ್ಸು ಮೀರದ ಆಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.50 ರಷ್ಟು ಮೀಸಲಾತಿ ಇರುತ್ತದೆ….

Read More

ಗೆಜೆಟೆಡ್​ ಪ್ರೊಬೇಷನರ್ಸ್​​ ಪರೀಕ್ಷೆ ಮರು ನಡೆಸಿ: ಕೆಪಿಎಸ್​ಸಿಗೆ C M ಸಿದ್ದರಾಮಯ್ಯ ಆದೇಶ

ಎರಡು ತಿಂಗಳ ಒಳಗಾಗಿ ಗೆಜೆಟೆಡ್​ ಪ್ರೊಬೇಷನರ್ಸ್​​​ ಪೂರ್ವಭಾವಿ ಪರೀಕ್ಷೆಯನ್ನು ಮರು ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಬೆಂಗಳೂರು, ಸೆಪ್ಟೆಂಬರ್​ 02: ಎರಡು ತಿಂಗಳ ಒಳಗಾಗಿ ಗೆಜೆಟೆಡ್​ ಪ್ರೊಬೇಷನರ್ಸ್​​​ ಪೂರ್ವಭಾವಿ ಪರೀಕ್ಷೆಯನ್ನು ( Gazetted Probationers Preliminary Exam ) ಮರು ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ( Siddaramaiah ) ಅವರು ಕರ್ನಾಟಕ ಲೋಕಸೇವಾ ಆಯೋಗ ( KPSC )​ಕ್ಕೆ ಸೂಚನೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಟ್ವೀಟ್​ ಮಾಡಿದ ಸಿಎಂ ಸಿದ್ದರಾಮಯ್ಯ, ‘ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ…

Read More

ದರ್ಶನ್ ಬಳ್ಳಾರಿ ಜೈಲ್ ಗೆ ಶಿಫ್ಟ್ ಆಗಿರುವ ಹಿಂದೆ ಜಮೀರ್‌ ಕೈವಾಡ?

ಹುಬ್ಬಳ್ಳಿ: ದರ್ಶನ್ ಬಳ್ಳಾರಿ ಜೈಲಿಗೆ ಬಂದು ಇಂದಿಗೆ ನಾಲ್ಕು ದಿನಗಳಾಗಿವೆ.ಇನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಟ ದರ್ಶನರನ್ನ ಶಿಫ್ಟ್​ ಮಾಡಿರುವ ವಿಚಾರವಾಗಿ ಜಿಲ್ಲೆಯ ಉಸ್ತುವಾರಿ ಸಚಿವ ಜಮೀರ್​ ಅಹ್ಮದ್​ ಮಾತನಾಡಿ, ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿ ಇರಬಹುದು, ಡಿಜಿ ಅಲ್ಲ. ಜೈಲಿನಲ್ಲಿ ರಾಜಾತಿಥ್ಯದ ಫೋಟೋಗಳು ಮಾಧ್ಯಮದಲ್ಲೇ ಬಂದಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದು​ ಪೊಲೀಸ್ ಇಲಾಖೆ ತೀರ್ಮಾನ ಎಂದು ಹೇಳಿದರು. ದರ್ಶನ್ ಬಳ್ಳಾರಿಗೆ ಬರೋದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದು ಪೊಲೀಸ್ ಇಲಾಖೆಯ ತೀರ್ಮಾನ….

Read More

ಕಿಚ್ಚನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ : ಹೊಸ ಸಿನಿಮಾ ಘೋಷಣೆ ಮಾಡಿದ ನಟ ಸುದೀಪ್

ಬೆಂಗಳೂರು : ಹುಟ್ಟು ಹಬ್ಬದ ದಿನವೇ ನಟ ಕಿಚ್ಚ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಹೌದು, ನಟ ಸುದೀಪ್ ‘ಬಿಲ್ಲಾ ರಂಗಾ ಭಾಷಾ ಸಿನಿಮಾ’ ಘೋಷಣೆ ಮಾಡಿದ್ದು, ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿದೆ. ಬಿಲ್ಲಾ ರಂಗ ಭಾಷಾ ಸಿನಿಮಾದ ಟೈಟಲ್ ಲೋಗೋ ಮತ್ತು ಪರಿಕಲ್ಪನೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನಟ ಸುದೀಪ್ ಹಂಚಿಕೊಂಡಿದ್ದಾರೆ. ವಿಕ್ರಾಂತ್ ರೋಣ ನಿರ್ದೇಶಕರಿಂದ ಬಿಲ್ಲಾ ರಂಗ ಭಾಷಾ ಸಿನಿಮಾ ತಯಾರಾಗುತ್ತಿದೆ. ಒಂದಾನೊಂದು ಕಾಲದಲ್ಲಿ ಕ್ರಿ.ಶಕ 2209ರಲ್ಲಿ ಎಂದು ಆರಂಭವಾಗುವ ವಿಡಿಯೋದಲ್ಲಿ ಬಿಲ್ಲಾ ರಂಗ…

Read More

ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾ ವೆಚ್ಚ ತಿಂಗಳಿಗೆ 54 ಲಕ್ಷ ರೂ.: RTI ಅರ್ಜಿಯಿಂದ ಬಹಿರಂಗ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ಅವರ ಕಚೇರಿ ತಿಂಗಳಿಗೆ 54 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದು ಆರ್ಟಿಐ ಉತ್ತರವೊಂದು ತಿಳಿಸಿದೆ. ಹಣದ ಕೊರತೆಯಿಂದಾಗಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಗುತ್ತಿಗೆದಾರರಿಗೆ ಪಾವತಿಸಲು ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿದೆ ಎಂಬ ಆರೋಪಗಳ ನಡುವೆ ಈ ವೆಚ್ಚವು ಹುಬ್ಬೇರುವಂತೆ ಮಾಡಿದೆ. ಆರ್ಟಿಐ ಕಾರ್ಯಕರ್ತ ಮರಿಲಿಂಗಗೌಡ ಮಾಲಿ ಪಾಟೀಲ್ ಅವರು ಅರ್ಜಿ ಸಲ್ಲಿಸಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವಾಗ ಇಷ್ಟು ಮೊತ್ತವನ್ನು ಏಕೆ ಹಂಚಿಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ….

Read More

ಮಾಜಿ ಸಿ ಎಂ ಬಿ ಎಸ್ ವೈ ಗೆ ಮತ್ತೆ ಸಂಕಷ್ಟ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಅವರಿಗೆ ಮತ್ತೊಮ್ಮೆ (POCSO Case) ಸಂಕಷ್ಟ ಎದುರಾಗಿದೆ. ಈ ಹಿಂದೆ ಬಿಎಸ್‌ವೈ ವಿರುದ್ಧ ದಾಖಲಾಗಿ ತಣ್ಣಗಾಗಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ (Sexual Harassment) ಪೋಕ್ಸೋ ಪ್ರಕರಣ ಮತ್ತೊಮ್ಮೆ ಮರುಜೀವ ಪಡೆದಿದೆ. ಬಿಎಸ್‌ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಸಂತ್ರಸ್ತ ಬಾಲಕಿಯ ತಾಯಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಮತಾ ಸಾವಿನ ವಿಚಾರದ ಬಗ್ಗೆ ರಾಜ್ಯ ಮಹಿಳಾ ಆಯೋಗ ಅನುಮಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಈ…

Read More

ಮಹಾಮಳೆಗೆ ಆಂಧ್ರ – ತೆಲಂಗಾಣ ತತ್ತರ : ೧೩೦ ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು , ಜನ ಜೀವನ ಅಸ್ತವ್ಯಸ್ತ

ಆಂಧ್ರ ಮತ್ತು ತೆಲಂಗಾಣದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ,ಜನಜೀವನ ಅಸ್ತವ್ಯಸ್ತಗೊಂಡಿದೆ. ಹೈದರಾಬಾದ್ ಮಾರ್ಗವಾಗಿ ಸಂಚರಿಸಬೇಕಿದ್ದ 130 ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು ಮಾಡಲಾಗಿದ್ದು . 92 ಕ್ಕೂ ಹೆಚ್ಚು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ . ಯಾವುದೇ ತುರ್ತು ಸಂದರ್ಭದಲ್ಲಿ ನೆರವಾಗಲು ೧೫ ತುರ್ತು ನಿರ್ವಹಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

Read More

ಪ್ಯಾರಾಲಿಂಪಿಕ್ಸ್ : ಹೈಜಂಪ್ ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಹೈ ಜಂಪ್ ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಗೆ ಬೆಳ್ಳಿ ಪದಕ ಒಲಿದಿದೆ . ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ ನಲ್ಲಿಯೂ ನಿಶಾದ್ ಬೆಳ್ಳಿ ಗೆದ್ದಿದ್ದರು

Read More

ಪ್ರಾಸಿಕ್ಯೂಷನ್ ಸಮರ: ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್

ಮುಡಾ ( ಮೈಸೂರು ನಗರಾಭಿವೃದ್ಧಿ ನಿಗಮ ) ದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿದೆ . ಇದರ ಭಾಗವಾಗಿ ಇಂದು ಕಾಂಗ್ರೆಸ್ ನಾಯಕರಿಂದ ರಾಜಭವನ ಚಲೋ ಹಮ್ಮಿಕೊಂಡು ರಾಜಭವನಕ್ಕೆ ಮುತ್ತಿಗೆ ಹಾಕುವ ಯತ್ನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ , ಮತ್ತಿತರ ಕಾಂಗ್ರೆಸ್ ನಾಯಕರು ರಾಜ್ಯಪಾಲರ ದ್ವಿಮುಖ ನೀತಿಯನ್ನು…

Read More

ತುಂಗಭದ್ರಾ ಅಣೆಕಟ್ಟು: ಹೈದರಾಬಾದ್ -ಕರ್ನಾಟಕದ ಜೀವಾಳ

ತುಂಗಭದ್ರಾ ಅಣೆಕಟ್ಟು, ಅದ್ಭುತವಾಗಿ, ಭಾರತದ ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ಪ್ರಗತಿ ಮತ್ತು ಪೋಷಣೆಯ ಸಂಕೇತವಾಗಿ ನಿಂತಿದೆ. ತುಂಗ ಮತ್ತು ಭದ್ರಾ ನದಿಗಳ ಮೇಲೆ ನಿರ್ಮಿತವಾದ ಈ ಅಣೆಕಟ್ಟು, ಪ್ರಾಂತ್ಯದ ಜನರ ಬದುಕಿಗೆ ಬೇಕಾದ ನೀರಿನ ಪೂರೈಕೆ, ಮತ್ತು ವಿದ್ಯುತ್ ಉತ್ಪಾದನೆ ಅಷ್ಟೇ ಅಲ್ಲದೆ ಇದು ಪ್ರಾಂತ್ಯದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಒಳಗೊಂಡಿದೆ. ಐತಿಹಾಸಿಕ ಹಿನ್ನೆಲೆ :-ತುಂಗಭದ್ರಾ ಅಣೆಕಟ್ಟು, ಬಳ್ಳಾರಿ-ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಸಮೀಪವಿರುವ ಅಣೆಕಟ್ಟು , 1946 ರಿಂದ 1953 ರ ನಡುವೆ ನಿರ್ಮಿಸಲಾಯಿತು….

Read More

ದರ್ಶನ್: ಯಶಸ್ಸಿನ ಹಾದಿಯ ಏಳು – ಬೀಳುಗಳು

ದರ್ಶನ್, ಕನ್ನಡ ಚಿತ್ರರಂಗದ “ಚಾಲೆಂಜಿಂಗ್ ಸ್ಟಾರ್” ಎಂದೇ ಹೆಸರಾಗಿರುವ ನಟ, ತನ್ನ ಪ್ರಾರಂಭಿಕ ದಿನಗಳಿಂದಲೇ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಅವರ ಯಶಸ್ಸಿನ ಹಾದಿ ಸುಲಭವಾಗಿರಲಿಲ್ಲ. ಅನೇಕ ಏರುಪೇರುಗಳನ್ನು ಅನುಭವಿಸುತ್ತಾ, ದರ್ಶನ್ ಅವರು ಕಠಿಣ ಪರಿಶ್ರಮ, ಅಭಿಮಾನಿಗಳ ಅಚ್ಚುಮೆಚ್ಚಿನ ಪಾತ್ರಗಳು, ಮತ್ತು ತೀವ್ರ ಅಭಿರುಚಿಯಿಂದ ತಮ್ಮನ್ನು ಖ್ಯಾತ ನಟನಾಗಿ ಸಾಬೀತುಪಡಿಸಿದ್ದಾರೆ. ಖ್ಯಾತ ಖಳ ನಟನ ಮಗನಾಗಿ ಜನಿಸಿದರೂ, , ತಮ್ಮದೇ ಆದ ಹಾದಿಯಲ್ಲಿ ಸಾಗಿ, ಚಿತ್ರರಂಗದಲ್ಲಿ ಖ್ಯಾತಿಯ ಹಾದಿ ಪೂರೈಸಲು ಸಾಕಷ್ಟು ಕಷ್ಟ ಅನುಭವಿಸಿದರು.“ಮೆಜೆಸ್ಟಿಕ್”…

Read More

ರಾಜಕೀಯ ಮುತ್ಸದ್ದಿ ಕೆ ಹೆಚ್ ಶ್ರೀನಿವಾಸ್ ಇನ್ನಿಲ್ಲ

ರಾಜ್ಯದ ಹಿರಿಯ ಮತ್ತು ಮುತ್ಸದ್ದಿ ರಾಜಕೀಯ ನಾಯಕರಾಗಿದ್ದ ಕೆ ಎಚ್ ಶ್ರೀನಿವಾಸ್ ಇಂದು ಕೊನೆಯುಸಿರೆಳೆದ್ದಿದ್ದಾರೆ. ಈ ಕುರಿತ ಮಾಹಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದೆ . ರಾಜಕಾರಣಿಯಾಗಿ ಅಷ್ಟೇ ಅಲ್ಲದೆ ತಮ್ಮನ್ನು ಲೇಖಕ , ಕವಿ , ಅನುವಾದರಾಗಿಯೂ ಶ್ರೀನಿವಾಸ್ ಗುರುತಿಸಿಕೊಂಡಿದ್ದರು. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರಾಗಿದ್ದ ಇವರು ಅಲ್ಲಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿದರು . ಅಷ್ಟೇ ಅಲ್ಲದೆ ದೇವರಾಜ್ ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದರು ,…

Read More

ನಾಡಿನ ಅಹಿಂದ ನಾಯಕರ ಉದಯ ಮತ್ತು ಪ್ರಗತಿ

ಸಿದ್ದರಾಮಯ್ಯ, ಕರ್ನಾಟಕದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದನಾಯಕನಾಗಿ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ದಲಿತರು) ಹಿತಚಿಂತಕರಾಗಿ ಪರಿವರ್ತನೆ ಹೊಂದಿದ್ದಾರೆ. 1957ರಲ್ಲಿ ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಜನಿಸಿದ ಸಿದ್ದರಾಮಯ್ಯ, ಸರಳ ಹಿನ್ನಲೆಯಲ್ಲಿ ಬೆಳೆದು, ತಮ್ಮ ಚಾತುರ್ಯದಿಂದ ಮತ್ತು ಬುದ್ಧಿವಂತಿಕೆಯ ಮೂಲಕ ಕರ್ನಾಟಕದ ರಾಜಕೀಯ ರಂಗದಲ್ಲಿ ಪ್ರಮುಖ ಪಾತ್ರವಹಿಸುತ್ತಾ ಬಂದಿದ್ದಾರೆ. ವಕೀಲಿಕೆ ಪದವಿಯನ್ನು ಪಡೆದ ಸಿದ್ದರಾಮಯ್ಯ. 1983ರಲ್ಲಿ ತಮ್ಮ ರಾಜಕೀಯ ಪ್ರವೇಶವನ್ನು ಕನ್ನಡಿಗರ ಜನತಾ ಪಕ್ಷದ ಸದಸ್ಯರಾಗಿ ಪ್ರಾರಂಭಿಸಿದರು. ಆದರೆ, 1992ರಲ್ಲಿ ಅವರು ಜೆಡಿಎಸ್ ಸೇರುವ ಮೂಲಕ, ತನ್ನ…

Read More