ಬೆಂಗಳೂರು : ಹುಟ್ಟು ಹಬ್ಬದ ದಿನವೇ ನಟ ಕಿಚ್ಚ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಹೌದು, ನಟ ಸುದೀಪ್ ‘ಬಿಲ್ಲಾ ರಂಗಾ ಭಾಷಾ ಸಿನಿಮಾ’ ಘೋಷಣೆ ಮಾಡಿದ್ದು, ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿದೆ.
ಬಿಲ್ಲಾ ರಂಗ ಭಾಷಾ ಸಿನಿಮಾದ ಟೈಟಲ್ ಲೋಗೋ ಮತ್ತು ಪರಿಕಲ್ಪನೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನಟ ಸುದೀಪ್ ಹಂಚಿಕೊಂಡಿದ್ದಾರೆ.
ವಿಕ್ರಾಂತ್ ರೋಣ ನಿರ್ದೇಶಕರಿಂದ ಬಿಲ್ಲಾ ರಂಗ ಭಾಷಾ ಸಿನಿಮಾ ತಯಾರಾಗುತ್ತಿದೆ. ಒಂದಾನೊಂದು ಕಾಲದಲ್ಲಿ ಕ್ರಿ.ಶಕ 2209ರಲ್ಲಿ ಎಂದು ಆರಂಭವಾಗುವ ವಿಡಿಯೋದಲ್ಲಿ ಬಿಲ್ಲಾ ರಂಗ ಭಾಷಾ ಎಂಬ ಮೂವರ ಕಥೆಯ ಬಗ್ಗೆ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ಈ ಸಿನಿಮಾಗೆ ಅನೂಪ್ ಬಂಡಾರಿ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಸಿನಿಮಾ ಯಾವ ಲೆವೆಲ್ ಗೆ ಸದ್ದು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಇಂದು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.