ಹುಬ್ಬಳ್ಳಿ: ದರ್ಶನ್ ಬಳ್ಳಾರಿ ಜೈಲಿಗೆ ಬಂದು ಇಂದಿಗೆ ನಾಲ್ಕು ದಿನಗಳಾಗಿವೆ.ಇನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಟ ದರ್ಶನರನ್ನ ಶಿಫ್ಟ್ ಮಾಡಿರುವ ವಿಚಾರವಾಗಿ ಜಿಲ್ಲೆಯ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಮಾತನಾಡಿ, ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿ ಇರಬಹುದು, ಡಿಜಿ ಅಲ್ಲ.
ಜೈಲಿನಲ್ಲಿ ರಾಜಾತಿಥ್ಯದ ಫೋಟೋಗಳು ಮಾಧ್ಯಮದಲ್ಲೇ ಬಂದಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದು ಪೊಲೀಸ್ ಇಲಾಖೆ ತೀರ್ಮಾನ ಎಂದು ಹೇಳಿದರು. ದರ್ಶನ್ ಬಳ್ಳಾರಿಗೆ ಬರೋದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದು ಪೊಲೀಸ್ ಇಲಾಖೆಯ ತೀರ್ಮಾನ. ಜೈಲಿನಲ್ಲಿ ಟೀ-ಕಪ್ ಹಿಡಿದು, ಸಿಗರೇಟ್ ಸೇದುತ್ತಿದ್ದ ಫೋಟೋ ವೈರಲ್ ಆಗಿತ್ತು. ಅದು ಮಾಧ್ಯಮಗಳಲ್ಲಿ ಪ್ರಸಾರವಾದ ಮೇಲೆ ಶಿಫ್ಟ್ ಮಾಡಲಾಗಿದೆ. ನಾನು ಜಿಲ್ಲಾ ಉಸ್ತುವಾರಿ ಆಗಿರಬಹುದು. ಆದರೆ ನಾನು ಡಿಜಿ ಅಲ್ಲ. ನಾನು ಬರೀ ಜಿಲ್ಲಾ ಉಸ್ತುವಾರಿ ಮಂತ್ರಿ ಅನ್ನೋ ಮೂಲಕ ತಮಗೆ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.