ಮುಡಾ ( ಮೈಸೂರು ನಗರಾಭಿವೃದ್ಧಿ ನಿಗಮ ) ದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿದೆ . ಇದರ ಭಾಗವಾಗಿ ಇಂದು ಕಾಂಗ್ರೆಸ್ ನಾಯಕರಿಂದ ರಾಜಭವನ ಚಲೋ ಹಮ್ಮಿಕೊಂಡು ರಾಜಭವನಕ್ಕೆ ಮುತ್ತಿಗೆ ಹಾಕುವ ಯತ್ನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ , ಮತ್ತಿತರ ಕಾಂಗ್ರೆಸ್ ನಾಯಕರು ರಾಜ್ಯಪಾಲರ ದ್ವಿಮುಖ ನೀತಿಯನ್ನು ಖಂಡಿಸಿದರು , ರಾಜ್ಯ ಪಾಲರು ನಿಜಕ್ಕೂ ಭ್ರಷ್ಟಾಚಾರ ವಿರೋಧಿಯಾಗಿದ್ದರೆ ವಿರೋಧ ಪಕ್ಷದ ಸದಸ್ಯರಾದ ಹೆಚ್ ಡಿ ಕುಮಾರ್ ಸ್ವಾಮಿ , ಶಶಿಕಲಾ ಜೊಲ್ಲೆ , ಜನಾರ್ಧನ ರೆಡ್ಡಿ ಸೇರಿದಂತೆ ಇತರ ವಿರೋಧಪಕ್ಷ ಸದಸ್ಯರ ವಿರುದ್ಧ ವರ್ಷಗಳಿಂದ ಬಾಕಿ ಇರುವ ಪ್ರಕರಣ ಗಳನ್ನೂ ವಿಚಾರಣೆಗೆ ಕೊಡುವಂತೆ ಆಗ್ರಹಿಸಿದರು
ಪ್ರಾಸಿಕ್ಯೂಷನ್ ಸಮರ: ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್
Subscribe
Login
0 Comments