ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್?
ಬೆಂಗಳೂರು: ಶಾಸಕ ಮುನಿರತ್ನ ಅವರು ಇಬ್ಬರು ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿಸಿದ್ದಾರೆ. ನನ್ನ ಬಳಿ ವಿಡಿಯೋಗಳಿವೆ. ಸೂಕ್ತ ಭದ್ರತೆ ನೀಡಿದರೆ ವಿಡಿಯೋ ನೀಡುವೆ ಎಂದು ಮುನಿರತ್ನ ಅವರಿಂದ ಅತ್ಯಾಚಾರಕ್ಕೊಳಗಾದ ಆರೋಪ ಮಾಡಿರುವ ಸಂತ್ರಸ್ತೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನಕ್ಕೋಸ್ಕರ ಮಾಜಿ ಸಿಎಂಗಳಿಬ್ಬರನ್ನು ಟ್ರ್ಯಾಪ್ ಮಾಡಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಈ ವಿಡಿಯೋಗಳು ನನ್ನ ಬಳಿ ಇವೆ. ಈಗಾಗಲೇ ಕೋರ್ಟ್ ಗೆ ಸೂಕ್ತ ದಾಖಲಾತಿಗಳನ್ನು ನೀಡಿದ್ದೇನೆ ಎಂದು ತಿಳಿಸಿದರು….