ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್?

ಬೆಂಗಳೂರು: ಶಾಸಕ ಮುನಿರತ್ನ ಅವರು ಇಬ್ಬರು ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿಸಿದ್ದಾರೆ. ನನ್ನ ಬಳಿ ವಿಡಿಯೋಗಳಿವೆ. ಸೂಕ್ತ ಭದ್ರತೆ ನೀಡಿದರೆ ವಿಡಿಯೋ ನೀಡುವೆ ಎಂದು ಮುನಿರತ್ನ ಅವರಿಂದ ಅತ್ಯಾಚಾರಕ್ಕೊಳಗಾದ ಆರೋಪ ಮಾಡಿರುವ ಸಂತ್ರಸ್ತೆ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನಕ್ಕೋಸ್ಕರ ಮಾಜಿ ಸಿಎಂಗಳಿಬ್ಬರನ್ನು ಟ್ರ್ಯಾಪ್ ಮಾಡಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಈ ವಿಡಿಯೋಗಳು ನನ್ನ ಬಳಿ ಇವೆ. ಈಗಾಗಲೇ ಕೋರ್ಟ್ ಗೆ ಸೂಕ್ತ ದಾಖಲಾತಿಗಳನ್ನು ನೀಡಿದ್ದೇನೆ ಎಂದು ತಿಳಿಸಿದರು.

ಮುನಿರತ್ನ ಅವರಿಂದ ಜೀವ ಬೆದರಿಕೆ ಇದ್ದ ಕಾರಣ ಏನನ್ನೂ ಮಾತನಾಡಿಲ್ಲ. ಐದಾರು ಹೆಚ್ ಐವಿ ಸೋಂಕಿತ ಮಹಿಳೆಯರನ್ನು ಬಳಸಿಕೊಂಡು ಕೆಲವರಿಗೆ ಹನಿಟ್ರ್ಯಾಪ್ ಮಾಡುವ ಉದ್ದೇಶ ಮಾತ್ರವಲ್ಲ, ತೊಂದರೆ ನೀಡುವ ತಂತ್ರವನ್ನು ಮುನಿರತ್ನ ರೂಪಿಸಿದ್ದರು. ನಾಲ್ಕೈದು ಮಂದಿ ಸೋಂಕಿತರಿಂದ ಹನಿಟ್ರ್ಯಾಪ್ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.

ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಇಬ್ಬರು ಮಾಜಿ ಸಿಎಂಗಳ ವಿಡಿಯೋಗಳು ನನ್ನ ಬಳಿ ಇದೆ. ಮುನಿರತ್ನರ ಬಳಿ ಇವೆ. ಆದ್ರೆ, ಸಿಎಂಗಳು ಯಾರೆಂದು ಮಾತ್ರ ಬಹಿರಂಗಪಡಿಸುವುದಿಲ್ಲ. ಸೂಕ್ತ ರಕ್ಷಣೆ ಕೊಟ್ಟರೆ ವಿಡಿಯೋ ನೀಡುತ್ತೇನೆ ಎಂದು ತಿಳಿಸಿದರು.

See also  ಮಹಾರಾಷ್ಟ್ರದಲ್ಲಿ ಜಂಗಲ್ ರಾಜ್ - ಬಾಬಾ ಸಿದ್ದಿಕಿ ಹತ್ಯೆಗೆ ರಾಗಾ ಕಿಡಿ
0 0 votes
Article Rating
Subscribe
Notify of
guest
0 Comments
Inline Feedbacks
View all comments