ಈ ವರ್ಷದ ಮಳೆಯು ಕೂಡ್ಲಿಗಿ ನಗರಕ್ಕೆ ಹೊಸ ಜೀವ ತುಂಬಿದ್ದು . ಹಲವು ದಿನಗಳಿಂದ ಕೆರೆ ತುಂಬುವ ನಿರೀಕ್ಷೆಯಲ್ಲಿದ್ದ ರೈತಾಪಿ ಜನರಿಗೆ ದಸರಾ ಹಬ್ಬದ ಬಂಪರ್ ಕೊಡುಗೆ ಸಿಕ್ಕಂತಾಗಿದೆ , ನಿನ್ನೆ ಧೋ ಎಂದು ಸುರಿದ ಮಳೆಗೆ ನಗರದ ದೊಡ್ಡಕೆರೆ ತುಂಬಿದ್ದು ಕೋಡಿ ಬಿದ್ದಿದೆ, ಕೆರೆಯಂಗಳದಲ್ಲಿ ಹರಿಯುತ್ತಿರುವ ಕೋಡಿ ನೀರಿನಲ್ಲಿ ಹಿರಿಯರು ಸೇರಿದಂತೆ ಮಕ್ಕಳು ನೀರಾಟದಲ್ಲಿ ಮುಳುಗಿದ್ದಾರೆ . ರೈತಾಪಿ ಜನ ತಮ್ಮ ಹೊಲ-ಗದ್ದೆಗಳ ಕಡೆಗೆ ಎಡತಾಕಿ , ಈ ಮಳೆ ಹೊಸ ಬೆಳೆಗೆ ಅನುಕೂಲವಾಗಲಿದೆ ಎಂಬ ಭರವಸೆ ಹೊಂದಿದ್ದಾರೆ.ಒಟ್ಟಾರೆ ನಗರದಲ್ಲಿ ಸಂಭ್ರಮ ಮೇಳೈಸಿದ್ದು ಸಮೃದ್ಧಿಯು ಸಡಗರದ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ. ಬರದಿಂದ ಮೂಡಿದ್ದ ಕಷ್ಟ ಈಗ ಉತ್ಸಾಹದ ಕ್ಷಣಗಳಾಗಿ ಮಾರ್ಪಟ್ಟಿದೆ.
ಮೈತುಂಬಿಕೊಂಡ ಕೆರೆ : ನಗರವಾಸಿಗಳ ಹರ್ಷ
Subscribe
Login
0 Comments