ಕಲಬುರಗಿ: ಕೇಂದ್ರ ಸರ್ಕಾರವೇ ಪ್ಯಾಲೇಸ್ತೀನ್ ಗೆ ಬೆಂಬಲ ನೀಡಿದೆ. ಹೀಗಿರುವಾಗ ಪ್ಯಾಲೇಸ್ತೀನ್ ಧ್ವಜ ಹಿಡಿದರೆ ತಪ್ಪೇನು ಎಂದು ವಸತಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.
ರಾಜ್ಯದ ಅನೇಕ ಕಡೆ ಪ್ಯಾಲೇಸ್ತೀನ್ ದ್ವಜ ಹಾರಾಟ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರವೇ ವಿ ಆರ್ ವಿತ್ ಪ್ಯಾಲೇಸ್ತೀನ್ ಎಂದು ಹೇಳಿದೆ.ಕೇಂದ್ರ ಹೇಳಿದ ಮೇಲೆ ತಾನೇ ಯಾರ ಧ್ವಜ ಹಿಡಿದಿದ್ದು, ಧ್ವಜ ಹಿಡಿದರೆ ತಪ್ಪೇನು ಇಲ್ಲ ಅನಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಬೇರೆ ದೇಶದ ಪರ ಘೋಷಣೆ ಕೂಗಿದರೆ ಅಂಥವರು ದೇಶದ್ರೋಹಿಗಳು. ಯಾರೇ ಆಗಿದ್ದರೂ ಅಂಥವರ ವಿರುದ್ಧ ಗಲ್ಲು ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ನಾನು ಮೊದಲು ಹಿಂದೂಸ್ತಾನಿ, ಕನ್ನಡಿಗ, ಆಮೇಲೆ ಮುಸ್ಲಿಂ ಎಂದು ಹೇಳಿದ ಜಮೀರ್ ಅಹ್ಮದ್, ಬಿಜೆಪಿಯವರಿಗೆ ಮಾಡೋಕೆ ಕೆಲಸವಿಲ್ಲ. ಹಾಗಾಗಿ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಾಗಮಂಗಲ ಕೇಸ್ ನಲ್ಲಿ ಬಿಜೆಪಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಪ್ಯಾಲೇಸ್ತೀನ್ ಧ್ವಜ ಹಿಡಿದರೆ ತಪ್ಪೇನು.? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
Subscribe
Login
0 Comments