ಲಖನೌ: ಕ್ಯಾನ್ಸರ್ನಿಂದ ಬಳಲುತ್ತಿರುವವರು ಗೋಶಾಲೆಗಳನ್ನು (Goshala) ಸ್ವಚ್ಛಗೊಳಿಸಿ ಅದರಲ್ಲಿ ಮಲಗುವುದರಿಂದ ರೋಗದಿಂದ ಗುಣಮುಖರಾಗುತ್ತಾರೆ. ಗೋವುಗಳಿಗೆ ಮೇವು ನೀಡಿ ಸಾಕುವುದರಿಂದ ರಕ್ತದೊತ್ತಡದ ಸಮಸ್ಯೆಯು ಕೇವಲ 10 ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದು ಹೇಳುವ ಮೂಲಕ ಉತ್ತರಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಸಂಜಯ್ ಸಿಂಗ್ ಗಂಗ್ವಾರ್ ಸುದ್ದಿಯಾಗಿದ್ದಾರೆ.
ಕಬ್ಬು ಬೆಳೆ ಅಭಿವೃದ್ಧಿ ಖಾತೆ ನಿಭಾಯಿಸುತ್ತಿರುವ ಸಂಜಯ್ ಸಿಂಗ್ ತಮ್ಮ ಸ್ವಕ್ಷೇತ್ರವಾದ ಫಿಲಿಬಿತ್ನ ಪಕಾಡಿಯಾ ನೌಗಾವಾನ್‌ನಲ್ಲಿ ನಡೆದ ಗೋಶಾಲೆಯ ಉದ್ಘಾಟನೆಯಲ್ಲಿ ಈ ಹೇಳಿಕೆ ನೀಡಿದ್ದು, ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳ ಜನ್ಮದಿನವನ್ನುಗೋಶಾಲೆಗಳಲ್ಲಿ ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿ ಎಂದು ಹೇಳುವ ಮೂಲಕ ಸಚಿವರು ಜನರ ಗಮನವನ್ನು ಸೆಳೆದಿದ್ದು, ವ್ಯಾಪಕ ಸುದ್ದಿಯಾಗುತ್ತಿದೆ.
ಕ್ಯಾನ್ಸರ್ ರೋಗಿಯು ದನದ ಕೊಟ್ಟಿಗೆಯನ್ನುಶುಚಿಗೊಳಿಸಿ, ಅಲ್ಲಿ ಮಲಗಿದರೆ ಕ್ಯಾನ್ಸರ್ ಕೂಡ ವಾಸಿಯಾಗುತ್ತದೆ. ನೀವು ಹಸುವಿನ ಬೆರಣಿ ಸುಟ್ಟರೆ, ಸೊಳ್ಳೆಗಳ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. ಆದ್ದರಿಂದ ಪಶುಸಂಗೋಪನೆ ಎಲ್ಲ ರೀತಿಯಿಂದಲೂ ನಮಗೆ ಉಪಯುಕ್ತವಾಗಿದ್ದು, ರಕ್ತದೊತ್ತಡ ರೋಗಿಯಿದ್ದರೆ… ಇಲ್ಲಿ ಹಸುಗಳಿವೆ. ವ್ಯಕ್ತಿಯು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಸುವಿನ ಬೆನ್ನಿನ ಮೇಲೆ ಸವರಿ ಅದಕ್ಕೆ ಆಹಾರ ನೀಡಬೇಕು. ಹೀಗೆ ಮಾಡಿದರೆ 10 ದಿನದೊಳಗೆ ನಿಮ್ಮ ಬಿಪಿ (BP) ಇಳಿದು ಹೋಗುತ್ತದೆ.
ಇದಲ್ಲದೆ ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಸುವ ಮೂಲಕ ಗೋವುಗಳಿಗೆ ಮೇವನ್ನು ದಾನವಾಗಿ ನೀಡಿ ಈ ರೀತಿ ಮಾಡಿದರೆ ನೀವು ಮಾದರಿಯಾಗುತ್ತೀರಾ ಮತ್ತು ಗೋಶಾಲೆಗಳಿಗೆ ಸಹಾಯವಾಗುತ್ತದೆ ಎಂದು ಉತ್ತರಪ್ರದೇಶ ಸರ್ಕಾರದ ಕಬ್ಬು ಅಭಿವೃದ್ಧಿ ಸಚಿವ ಸಂಜಯ್ ಸಿಂಗ್ಕರೆ ನೀಡಿದ್ದಾರೆ.