ಬೆಂಗಳೂರು: ಕೆಐಎಡಿಬಿ ಭೂ ಹಗರಣದಲ್ಲಿ ಸೈಟನ್ನು ಪ್ರಿಯಾಂಕ್ ಖರ್ಗೆ ಹಿಂದಿರುಗಿರಿಸೋದು ನ್ಯಾಯಕ್ಕೆ ಸಿಕ್ಕ ಮತ್ತೊಂದು ಗೆಲುವಾಗಿದೆ. ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ರಾಜೀನಾಮೆ ಯಾವಾಗ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಪ್ರಿಯಾಂಕ್ ಖರ್ಗೆ ಅವರು ಕೆಐಎಡಿಬಿ ಭೂ ಹಗರಣದಲ್ಲಿ ಸೈಟುಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿರುವುದು, ಸಿದ್ಧರಾಮಯ್ಯ ಅವರ ಮುಡಾ ಹಗರಣದ ನಂತ್ರ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಮತ್ತೊಂದು ಘಟನೆಯಾಗಿದೆ. ಇದು ನ್ಯಾಯಕ್ಕೆ ಸಿಕ್ಕ ಮತ್ತೊಂದು ಗೆಲುವು ಎಂದು ಪರಿಗಣಿಸಲಾಗಿದ್ದು, ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ನಮ್ಮ ಹೋರಾಟ ಸಫಲವಾಗಿದೆ ಎಂದಿದ್ದಾರೆ.
ಒಂದು ಕಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಡಾ ಹಗರಣ, ಮತ್ತೊಂದು ಕಡೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಕೆಐಎಡಿಬಿ ಹಗರಣ. ಈ ಎರಡೂ ಪ್ರಕರಣಗಳು ಕಾನೂನಿನ ಮುಂದೆ ತಲಬಾಗಿವೆ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ರಾಜೀನಾಮೆ ಯಾವಾಗ.? ಎಂ.ಬಿ ಪಾಟೀಲ್ ಅವರೇ ಇದನ್ನು ಬೆಳಕಿಗೆ ತಂದ ನನ್ನನ್ನು ಅಪಮಾನ ಮಾಡಿದ ತಾವು ಆಗಿರುವ ಅಪರಾಧಕ್ಕೆ ತನಿಖೆ ಮಾಡಿಸಿ, ನೋಟಿಫಿಕೇಷನ್ ರದ್ದುಗೊಳಿಸಿ. ಇಲ್ಲವೇ ನೈತಿಕತೆ ಹೊತ್ತು ರಾಜೀನಾಮೆ ನೀಡಿ ಎಂಬುದಾಗಿ ಆಗ್ರಹಿಸಿದ್ದಾರೆ.