ಗೋಶಾಲೆಯಲ್ಲಿ ಮಲಗಿದರೆ ಕ್ಯಾನ್ಸರ್ ವಾಸಿ?

ಲಖನೌ: ಕ್ಯಾನ್ಸರ್​ನಿಂದ ಬಳಲುತ್ತಿರುವವರು ಗೋಶಾಲೆಗಳನ್ನು (Goshala) ಸ್ವಚ್ಛಗೊಳಿಸಿ ಅದರಲ್ಲಿ ಮಲಗುವುದರಿಂದ ರೋಗದಿಂದ ಗುಣಮುಖರಾಗುತ್ತಾರೆ. ಗೋವುಗಳಿಗೆ ಮೇವು ನೀಡಿ ಸಾಕುವುದರಿಂದ ರಕ್ತದೊತ್ತಡದ ಸಮಸ್ಯೆಯು ಕೇವಲ 10 ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದು ಹೇಳುವ ಮೂಲಕ ಉತ್ತರಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಸಂಜಯ್​ ಸಿಂಗ್​ ಗಂಗ್ವಾರ್​ ಸುದ್ದಿಯಾಗಿದ್ದಾರೆ. ಕಬ್ಬು ಬೆಳೆ ಅಭಿವೃದ್ಧಿ ಖಾತೆ ನಿಭಾಯಿಸುತ್ತಿರುವ ಸಂಜಯ್​ ಸಿಂಗ್ ತಮ್ಮ ಸ್ವಕ್ಷೇತ್ರವಾದ ಫಿಲಿಬಿತ್​ನ ಪಕಾಡಿಯಾ ನೌಗಾವಾನ್‌ನಲ್ಲಿ ನಡೆದ ಗೋಶಾಲೆಯ ಉದ್ಘಾಟನೆಯಲ್ಲಿ ಈ ಹೇಳಿಕೆ ನೀಡಿದ್ದು, ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳ…

Read More