ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ಪುತ್ರ ವಿನೀಶ್ ಇದೇ ಮೊದಲನೇ ಸಲ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಭೇಟಿಯಾದರು.
ಭೇಟಿಗೆ ಹೆಚ್ಚುವರಿ ಸಮಯ ನೀಡುವಂತೆ ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರೂ ಪ್ರತ್ಯೇಕವಾಗಿ ಲಿಖಿತ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು 40 ನಿಮಿಷ ಕಾಲಾವಕಾಶ ಕಲ್ಪಿಸಿದರು.
ವಿಜಯಲಕ್ಷ್ಮಿ ಅವರು ಎಂದಿನಂತೆ ದರ್ಶನ್‌ಗಾಗಿ ಬಟ್ಟೆ ಮತ್ತು ತಿಂಡಿ-ತಿನಿಸಿನ ಎರಡು ಬ್ಯಾಗ್‌ಗಳನ್ನು ಜೈಲಿಗೆ ತಂದಿದ್ದರು.
ಶಸ್ತ್ರಚಿಕಿತ್ಸೆಗೆ ಸಲಹೆ: ‘ದರ್ಶನ್ ಅವರ ಬೆನ್ನಿನಲ್ಲಿ ಊತ ಕಾಣಿಸಿಕೊಂಡಿದ್ದು, ಬಳ್ಳಾರಿಯ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ (ವಿಮ್ಸ್) ವೈದ್ಯರು ತಪಾಸಣೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ದರ್ಶನ್‌ಗೆ ಸಲಹೆ ನೀಡಲಾಗಿದೆ. ಸದ್ಯ ನೋವು ನಿವಾರಕ ಔಷಧಗಳನ್ನು ನೀಡಲಾಗಿದೆ’ ಎಂದು ಜೈಲು ಅಧಿಕಾರಿಗಳು ತಿಳಿಸಿದರು.