ದರ್ಶನ್‌ ಭೇಟಿಯಾದ ಪುತ್ರ ವಿನೀಶ್‌

ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಅವರನ್ನು ಪುತ್ರ ವಿನೀಶ್‌ ಇದೇ ಮೊದಲನೇ ಸಲ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಭೇಟಿಯಾದರು. ಭೇಟಿಗೆ ಹೆಚ್ಚುವರಿ ಸಮಯ ನೀಡುವಂತೆ ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರೂ ಪ್ರತ್ಯೇಕವಾಗಿ ಲಿಖಿತ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು 40 ನಿಮಿಷ ಕಾಲಾವಕಾಶ ಕಲ್ಪಿಸಿದರು. ವಿಜಯಲಕ್ಷ್ಮಿ ಅವರು ಎಂದಿನಂತೆ ದರ್ಶನ್‌ಗಾಗಿ ಬಟ್ಟೆ ಮತ್ತು ತಿಂಡಿ-ತಿನಿಸಿನ ಎರಡು ಬ್ಯಾಗ್‌ಗಳನ್ನು ಜೈಲಿಗೆ ತಂದಿದ್ದರು.ಶಸ್ತ್ರಚಿಕಿತ್ಸೆಗೆ ಸಲಹೆ: ‘ದರ್ಶನ್‌ ಅವರ ಬೆನ್ನಿನಲ್ಲಿ ಊತ ಕಾಣಿಸಿಕೊಂಡಿದ್ದು, ಬಳ್ಳಾರಿಯ ವೈದ್ಯಕೀಯ…

Read More

ದರ್ಶನ್​​​​ಗೆ ಭಾರೀ ಆಘಾತ, ಜೈಲೇ ಗತಿ!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ನಟ ದರ್ಶನ್​​​ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ಇಂದು ನಡೆಸಿದ್ದು ಅ.4ಕ್ಕೆ ಮುಂದೂಡಿ ಆದೇಶಿಸಿದೆ.​ ಸದ್ಯ ಬಳ್ಳಾರಿ ಜೈಲಿನಲ್ಲಿರುವ ದರ್ಶನ್​​ ನ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್​​ ಮೂಲಕ ನಡೆಸಿರುವ 57ನೇ CCH ಕೋರ್ಟ್ ಈ ಆದೇಶವನ್ನು ನೀಡಿದೆ. ಇನ್ನು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ದರ್ಶನ್​​ಗೆ ಮತ್ತೆ ಆಘಾತ ಆಗಿದೆ. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಜೈ.ಶಂಕರ್ ಅವರು ಎಸ್​​ಪಿಪಿಗೆ ಆಕ್ಷೇಪಣೆ ಸಲ್ಲಿಸುವಂತೆ…

Read More

ಐಫಾ ಅವಾರ್ಡ್ಸ್ 2024: ಎಲ್ಲಾ ಪ್ರಶಸ್ತಿಗಳನ್ನು ಬಾಚಿಕೊಂಡ ಕನ್ನಡದ ಸಿನಿಮಾಗಳು

ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್ಸ್​ 2024ಕ್ಕೆ ಇಂದು ತೆರೆ ಬೀಳಲಿದೆ. ಸೆಪ್ಟೆಂಬರ್ 27ರಿಂದ ಪ್ರಾರಂಭವಾಗಿರುವ ಐಫಾ ಅವಾರ್ಡ್ಸ್​ 29ರ ವರೆಗೆ ನಡೆಯಲಿದೆ. ಭಾರತದ ಐದು ಪ್ರಮುಖ ಚಿತ್ರರಂಗಳ ಗಣ್ಯರು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಅತ್ಯುತ್ತಮ ಸಿನಿಮಾ, ತಂತ್ರಜ್ಞರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಕನ್ನಡದ ಎರಡೇ ಎರಡು ಸಿನಿಮಾಗಳಿಗೆ ಮಾತ್ರವೇ ಐಫಾ ಪ್ರಶಸ್ತಿ ನೀಡಲಾಗಿದೆ. ಎಲ್ಲ ವಿಭಾಗದ ಪ್ರಶಸ್ತಿಯನ್ನೂ ಕನ್ನಡದ ಕೇವಲ…

Read More

ದರ್ಶನ್​ ಬೆರಳ ಸನ್ನೆ ಸೀಕ್ರೆಟ್​?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್​ ಸೇರಿ 17 ಮಂದಿ ಆರೋಪಿಗಳು ಪ್ರಸ್ತುತ ಒಂದೊಂದು ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್​​​ನನ್ನು ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಯಿತು. ಬಳ್ಳಾರಿ ಜೈಲಿನಲ್ಲಿ ಇರಲು ನನಗೆ ಕಷ್ಟವಾಗುತ್ತಿದೆ ಎಂದು ನಟ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್​ ಅವರು ಇತ್ತೀಚೆಗೆ ನಡೆದುಕೊಂಡಿರುವ ರೀತಿಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರೆ ಅವರ ಫ್ಯಾನ್ಸ್​​ ಅದಕ್ಕೊಂದು ವಿಶ್ಲೇಷಣೆ ನೀಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್​ ಪತ್ನಿ ವಿಜಯಲಕ್ಷ್ಮಿ, ಅವರ…

Read More

Breaking: ನಟ ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ 17 ಆರೋಪಿಗಳಿಗೆ ಸೆಪ್ಟೆಂಬರ್ 12ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಇಂದು (ಸೋಮವಾರ) ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಬೆನ್ನಲ್ಲೇ ಇಂದು ಎಲ್ಲಾ 17 ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

Read More