ದರ್ಶನ್​ ಬೆರಳ ಸನ್ನೆ ಸೀಕ್ರೆಟ್​?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್​ ಸೇರಿ 17 ಮಂದಿ ಆರೋಪಿಗಳು ಪ್ರಸ್ತುತ ಒಂದೊಂದು ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್​​​ನನ್ನು ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಯಿತು.

ಬಳ್ಳಾರಿ ಜೈಲಿನಲ್ಲಿ ಇರಲು ನನಗೆ ಕಷ್ಟವಾಗುತ್ತಿದೆ ಎಂದು ನಟ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್​ ಅವರು ಇತ್ತೀಚೆಗೆ ನಡೆದುಕೊಂಡಿರುವ ರೀತಿಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರೆ ಅವರ ಫ್ಯಾನ್ಸ್​​ ಅದಕ್ಕೊಂದು ವಿಶ್ಲೇಷಣೆ ನೀಡುತ್ತಿದ್ದಾರೆ.

ಇತ್ತೀಚೆಗೆ ದರ್ಶನ್​ ಪತ್ನಿ ವಿಜಯಲಕ್ಷ್ಮಿ, ಅವರ ಸಹೋದರ ದಿನಕರ್​ ತೂಗುದೀಪ ಮತ್ತು ವಕೀಲರು ಬಳ್ಳಾರಿ ಜೈಲಿಗೆ ಹೋಗಿದ್ದರು. ಅವರ ಭೇಟಿಗೆ ಸಂಜೆ 4.15ಕ್ಕೆ ದರ್ಶನ್​ನನ್ನು ವಿಶೇಷ ಭದ್ರತಾ ಕೊಠಡಿಯಿಂದ ಜೈಲಿನ ಸಂದರ್ಶಕರ ಕೊಠಡಿಗೆ ಪೊಲೀಸರು ಕರೆ ತಂದಿದ್ದಾರೆ. ವಿಶೇಷ ಭದ್ರತಾ ಕೊಠಡಿಯಿಂದ ಸಂದರ್ಶಕರ ಕೊಠಡಿಗೆ ತೆರಳುತ್ತಿದ್ದ ವೇಳೆ ಕಾರಾಗೃಹದ ಗೇಟಿನ ಕಡೆ ನೋಡುತ್ತಾ ದರ್ಶನ್​ ತಮ್ಮ ಎರಡು ಕೈಗಳಲ್ಲಿ ಮಧ್ಯದ ಬೆರಳನ್ನು ತೋರುಸುತ್ತಾ ಸಾಗಿದ್ದಾರೆ. ನಟನ ಈ ನಡೆ ಸದ್ಯ ಭಾರೀ ಚರ್ಚೆಯಾಗುತ್ತಿದೆ. ಅಸಲಿಗೆ ದರ್ಶನ್​ ಅವರು ತಮ್ಮ ಪ್ರಸ್ತುತ ಪರಿಸ್ಥಿತಿಯಲ್ಲಿ ಅಸಭ್ಯ ವರ್ತನೆ ತೋರುವ ಮನಸ್ಥಿತಿಯಲ್ಲಿದ್ರಾ ಎನ್ನುವ ಕುತೂಹಲ ಇತ್ತು. ಈ ಮಧ್ಯೆ ದಾಸನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಧ್ಯದ ಬೆರಳು ತೋರುತ್ತಾ ಸಾಗಿರುವ ದರ್ಶನ್​ ನಡೆಯನ್ನು ಆತನ ಫ್ಯಾನ್ಸ್​​ ಬೇರೆ ಅರ್ಥದಲ್ಲಿ ಹೇಳುತ್ತಿದ್ದಾರೆ. ದರ್ಶನ್ ಅವರು ಜೈಲಿನಲ್ಲಿ ಯೋಗ, ಧ್ಯಾನ, ಪ್ರಾರ್ಥನೆ ಮೊರೆ ಹೋಗುತ್ತಿದ್ದಾರೆ ಎಂಬ ಹೊಸ ವಿಚಾರ ತಿಳಿಸಲು ಮುಂದಾಗಿದ್ದಾರೆ.

ದರ್ಶನ್​ ಮಧ್ಯದ ಬೆರಳು ತೋರಿದ್ದು ವಿಘ್ನಹರ ಮುದ್ರಾ ಸಿಂಬಲ್​ ಎಂದು ಬಿಂಬಿಸುತ್ತಿದ್ದಾರೆ. ಇದು ಅಸಭ್ಯ ವರ್ತನೆಯ ಕೈ ಸನ್ನೆ ಅಲ್ಲಾ ಎಂದು ಸಾಕ್ಷಿ ತೋರಿಸುತ್ತಿದ್ದಾರೆ. ದರ್ಶನ್​ ಜೈಲಿನಲ್ಲಿ ಯೋಗ, ಧ್ಯಾನ, ಪ್ರಾರ್ಥನೆ ಮೊರೆ ಹೋಗುತ್ತಿದ್ದಾರಂತೆ. ಹೀಗಾಗಿ ಅವರು ವಿಘ್ನಹರ ಮುದ್ರಾ ಸಿಂಬಲ್​​ ತೋರಿಸುತ್ತಾ ಹೋಗಿದ್ದಾರೆ ಅಷ್ಟೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸದ್ಯ ದರ್ಶನ್ ಮುದ್ರಾ ಸಿಂಬಾಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್​ಗಳಾದ ವಿಲ್ಸನ್‌ ಗಾರ್ಡನ್‌ ನಾಗನ ಜತೆ ಕುಳಿತು ದರ್ಶನ್‌ ಒಂದು ಕೈಯಲ್ಲಿ ಸಿಗರೇಟ್‌ ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದಿರುವ ಫೋಟೋ ಹಾಗೂ ವಿಐಪಿ ಸೆಲ್‌ನಿಂದಲೇ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ದೃಶ್ಯ ವೈರಲ್​ ಆಗಿತ್ತು. ಬಳಿಕ ಎಚ್ಚೆತ್ತ ಸರ್ಕಾರ ಪರಪ್ಪನ ಅಗ್ರಹಾರದ ಜೈಲಾಧಿಕಾರಿಗಳನ್ನು ಅಮಾನತುಗೊಳಿಸಲು ಆದೇಶಿಸಿ, ನಟನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿತು.

See also  ನ್ಯಾಷನಲ್ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಕಾಂಗ್ರೆಸ್, ಎಎಪಿ
5 1 vote
Article Rating
Subscribe
Notify of
guest
0 Comments
Inline Feedbacks
View all comments