ಫ್ಲೋರಿಡಾ,ಸೆ.16-ಇಲ್ಲಿನ ವೆಸ್ಟ್ ಪಾಮ್ ಬೀಚ್ನಲ್ಲಿರುವ ಗಾಲ್ಫ್ ಕ್ಲಬ್ನಲ್ಲಿ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಪ್ರಯತ್ನಿಸಲಾಗಿದೆ.
ಅಮೆರಿಕ ಮಾಜಿ ಅಧ್ಯಕ್ಷರು ಮತ್ತೆ ಫ್ಲೋರಿಡಾದಲ್ಲಿ ದಾಳಿಗೆ ಒಳಗಾಗಿದ್ದಾರೆ ಎಂದು ಎಫ್ಬಿಐ ತಿಳಿಸಿದೆ.ಒಂಬತ್ತು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿ ಅವರು ಪಾರಾಗಿದ್ದು , ಸುರಕ್ಷಿತವಾಗಿ ಆರೋಗ್ಯವಾಗಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಪ್ರತ್ಯಕ್ಷದರ್ಶಿ ನೀಡಿದ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.ಡೊನಾಲ್ಡ್ ಟ್ರಂಪ್ ಅವರು ಗಾಲ್್ಫ ನಲ್ಲಿ ಆಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪೊದೆಯಲ್ಲಿ ಅಡಗಿದ್ದ ದುಷ್ಕರ್ಮಿ ರೈಫಲ್ ಬಳಸಿರುವುದನ್ನು ಅಮೆರಿಕದ ಸೀಕ್ರೇಟ್ ಸರ್ವಿಸ್ ಪತ್ತೆಹಚ್ಚಿದೆ. ಗುಂಡು ಹಾರಿಸಿದ ಬಂದೂಕುಧಾರಿ ರೈಫಲ್ ನ್ನು ಕೆಳಗಿಳಿಸಿ ಅಲ್ಲಿಂದ ಪಲಾಯನ ಮಾಡಿ ಸಮೀಪವೇ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದಾನೆ.
ಕಳೆದ ಜುಲೈ 13 ರಂದು, ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಲಾಗಿತ್ತು, ಕಿವಿ ಪಕ್ಕದಲ್ಲಿ ಗುಂಡು ಹಾದುಹೋಗಿ ಗಾಯಗೊಂಡಿದ್ದರು.