ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಮೈಲಿಗಲ್ಲು ಸೃಷ್ಟಿಸಲು ಬಂದಿರುವ ಎ ಆರ್ ವಿಖ್ಯಾತ್. ನಿರ್ಮಾಪಕ ಸ್ಥಾನದಿಂದ ಸಿನಿಮಾ ನಿರ್ದೇಶಕ್ಕೆ ಬಡ್ತಿ ಹೊಂದಿದ್ದಾರೆ. ವಯಕ್ತಿಕವಾಗಿ ತಮ್ಮನ್ನು ತಾವು ಸಿನಿಮಾದವರು ಎಂದು ಕರೆಯಿಸಿಕೊಳ್ಳಲು ಜೀವನದ ಪ್ರತೀ ಕ್ಷಣವನ್ನು ಸಿನಿಮಾ ಸಂಶೋಧನೆಗೆ ಮುಡಿಪಾಗಿಟ್ಟಿರುವ ವಿಖ್ಯಾತ್. ಚಂದನವನದಲ್ಲಿ ಆಕ್ಷನ್ ಕಟ್ ಹೇಳಲು ನಿರ್ಧರಿಸಿ “Yours sincerely ರಾಮ್” ಎನ್ನುವ ಶೀರ್ಷಿಕೆಯೊಂದಿಗೆ ನಿರ್ದೇಶನಕ್ಕೆ ಮೊದಲ ಹೆಜ್ಜೆ ಹಾಕಿದ್ದಾರೆ.
ಮೂಲತಃ ಕರಾವಳಿ ಭಾಗದವರಾಗಿರುವ AR ವಿಖ್ಯಾತ್. ಗಾಂಧಿನಗರದಲ್ಲಿ ತಮ್ಮ ಹೆಸರನ್ನು ಸಾಬೀತುಪಡಿಸಿಕೊಳ್ಳಲು ಯಾವುದೇ ರಿಸ್ಕ್ ಗಳನ್ನೂ ಲೆಕ್ಕಿಸದೆ. ಕೇವಲ ವಿಷಯಾಧಾರಿತ ಕಲಾತ್ಮಕ ಚಿತ್ರಗಳಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಇನ್ಸ್ಪೆಕ್ಟರ್ ವಿಕ್ರಂ, ಪುಷ್ಪಕ ವಿಮಾನ, ಮಾನ್ಸೂನ್ ರಾಗ, ರಂಗನಾಯಕ ಸಿನಿಮಾಗಳಿಗೆ ಬಂಡವಾಳ ಹೂಡುತ್ತ ಸೋಲು ಗೆಲುವಿನ ರುಚಿಯನ್ನು ಸಮಾನವಾಗಿ ನೋಡಿದ್ದಾರೆ ಎಂದು ಊಹಿಸಬಹುದು.
ಇದೀಗ “Yours sincerely ರಾಮ್” ಎನ್ನುವ ಚಿತ್ರದ ಟ್ರೈಲರ್ ಅನಾವರಗೊಂಡಿದ್ದು. ಸಿನಿರಸಿಕರ ಹುಬ್ಬೇರಿಸುವ ನಿಟ್ಟಿನಲ್ಲಿ ಗಮನ ಸೆಳೆಯುತ್ತಿದೆ. ಸಿನಿಮಾದ ಆಡಿಯೋ ಹಕ್ಕು ಮತ್ತು ಜವಾಬ್ದಾರಿಯನ್ನು ಆನಂದ್ ಆಡಿಯೋ ನಿರ್ವಹಿಸಲಿದೆ. ಮುಖ್ಯ ತಾರಾಗಣದಲ್ಲಿ ಸ್ಯಾಂಡಲ್ ವುಡ್ ನ ಮಿಸ್ಟರ್ ಪರ್ಫೆಕ್ಟ್ ರಮೇಶ್ ಅರವಿಂದ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಸತ್ಯ ರಾಯಲ ಅವರು ಹೆಗಲು ನೀಡಿದ್ದು. ಸುಮಧುರ ಸಂಗೀತವನ್ನು ಅನೂಪ್ ಸೀಳಿನ್ ಅವರು ಸಂಯೋಜಿಸಲಿದ್ದಾರೆ. ಒಟ್ಟಾರೆ ಈ ಚಿತ್ರಕ್ಕೆ ವಿನೂತನ ಪ್ರತಿಭೆಗಳ ಜೊತೆಗೆ ಅನುಭವಿಗಳು ಕೈಜೋಡಿಸಿದ್ದಾರೆ ಎಂದು ದೃಡೀಕರಿಸಬಹುದು. ಈ ಚಿತ್ರ ಯಾವುದೇ ಆತಂಕಗಳಿಲ್ಲದೆ ಬೆಳ್ಳಿ ತೆರೆಯಲ್ಲಿ ರಾರಾಜಿಸಲಿ ಎಂದು ಹಾರೈಸೋಣ.