ಮುಡಾ ಹಗರಣ: ಆರೋಪ ಒಪ್ಪಿಕೊಂಡ ಸರ್ಕಾರ, ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ

ಮುಡಾ ಸೈಟ್ ಪ್ರಕರಣ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಆರ್ ಟಿ ಐ ಕಾರ್ಯಕರ್ತ ಗಂಗರಾಜು ಮೇಲೆ ಬೆದರಿಕೆ ಹಾಕಲಾಗಿದ್ದು, ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅಮಾನತು ಈಗ ಸಿದ್ಧರಾಮಯ್ಯಗೆ ಮತ್ತಷ್ಟು ತಲೆ ಬಿಸಿ ತಂದಿದೆ. ಆರ್ ಟಿಐ ಕಾರ್ಯಕರ್ತನ ಮೇಲೆ ಬೆದರಿಕೆ ಮತ್ತು ದಿನೇಶ್ ಕುಮಾರ್ ಅಮಾನತು ಆದೇಶ ಇಡೀ ಪ್ರಕರಣವನ್ನು ಮತ್ತೊಂದು ದಿಕ್ಕಿಗೆ ಹೊರಳಿಸುವ ಸಾಧ್ಯತೆ ಹೆಚ್ಚಾಗಿದೆ.

ಬೆಂಗಳೂರು/ಮೈಸೂರು, (ಸೆ.03): ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಸೈಟ್ ಪ್ರಕರಣವನ್ನು ಬಯಲಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಬೆದರಿಕೆ ಹಾಕಲ್ಪಟ್ಟಿರುವ ಆರೋಪ ವ್ಯಕ್ತವಾಗಿದೆ. ಬೆಂಗಳೂರು-ಮೈಸೂರು ಮುಖ್ಯರಸ್ತೆಯಲ್ಲಿ ಬೈಕ್ ಗಳಲ್ಲಿ ಬಂದಿದ್ದ ಅಪರಿಚಿತರು ಬೆದರಿಕೆ ಹಾಕಿದ್ದಾರೆ ಎಂದು ಗಂಗರಾಜು ಆರೋಪ ಮಾಡಿದ್ದಾರೆ. ಹೀಗಾಗಿ ಪ್ರಕರಣ ಹೈಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ಬೆದರಿಕೆ ಹಾಕಲ್ಪಟ್ಟಿರುವ ವಿಚಾರ ಇಡೀ ಪ್ರಕರಣಕ್ಕೆ ಮತ್ತೊಂದು ತಿರುವು ಕೊಡುವ ಸಾಧ್ಯತೆ ಇದೆ. ಇದೇ ವೇಳೆ ಗಂಗರಾಜು ಸೇರಿದಂತೆ ದೂರುದಾರರಿಗೆ ಸಿಎಂ ಕಡೆಯಿಂದ ಅಥವಾ ಸಿಎಂ ಹೆಸರಿನಲ್ಲಿ ಅಪಾಯ ಉಂಟಾಗುವ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ಸೂಕ್ತ ರಕ್ಷಣೆ ಕೊಡುವಂತೆ ಆಗ್ರಹಿಸಿದೆ. ಇನ್ನು ಸಿಎಂ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದು ತಪ್ಪು ಎಂದು ಅಧಿಕೃತವಾಗಿ ಸರ್ಕಾರ ಒಪ್ಪಿಕೊಂಡಿದೆ. ಈ ಒಂದು ಆದೇಶ ಸಿಎಂಗೆ ಮುಳ್ಳಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಬಿಜೆಪಿ ಆರೋಪವನ್ನು ಒಪ್ಪಿಕೊಂಡಿತೇ ರಾಜ್ಯ ಸರ್ಕಾರ?

ಈ ಮಧ್ಯೆ ಹಿಂದಿನ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ರನ್ನು ಅಮಾನತು ಮಾಡಿ ರಾಜ್ಯ ಸರ್ಕಾರವೇ ಹೊರಡಿಸಿರುವ ಆದೇಶ ಈಗ ಸಿಎಂಗೆ ತಲೆನೋವಾಗುವ ಸಾಧ್ಯತೆಗಳಿವೆ. ಆರಂಭದಿಂದಲೂ 50:50 ರ ಅನುಪಾತದಲ್ಲಿ ಸೈಟ್ ಹಂಚಿಕೆ ಆಗಿದೆ ಎಂಬ ಆರೋಪವನ್ನು ವಿಪಕ್ಷ ಬಿಜೆಪಿ ಮಾಡುತ್ತಲೇ ಬಂದಿತ್ತು. ಆದರೆ ನಿನ್ನೆ(ಸೆ.03) ಹೊರಡಿಸಲ್ಪಟ್ಟಿರುವ ಅಮಾನತು ಆದೇಶದಲ್ಲಿ 50:50 ಅನುಪಾತದಲ್ಲಿ ನಿಯಮ ಬಾಹಿರವಾಗಿ ನಡೆದುಕೊಂಡಿರುವ ಕಾರಣವನ್ನು ಕೊಡಲಾಗಿದೆ. ಇದರಿಂದಾಗಿ ಬಿಜೆಪಿ ಮತ್ತು ದೂರುದಾರರ ಆರೋಪವನ್ನು ರಾಜ್ಯ ಸರ್ಕಾರವೇ ಒಪ್ಪಿಕೊಂಡಂತಾಗಿದೆ.

See also  ಪ್ಯಾಲೇಸ್ತೀನ್ ಧ್ವಜ ಹಿಡಿದರೆ ತಪ್ಪೇನು.? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
0 0 votes
Article Rating
Subscribe
Notify of
guest
0 Comments
Inline Feedbacks
View all comments