ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ರಮ್ಯಾ

ಚಿತ್ರರಂಗದಲ್ಲಿ 40 ತುಂಬಿದರೂ ಮದುವೆ ಆಗದೆ ಉಳಿದಿರುವ ಬಹಳಷ್ಟು ನಟಿಯರಿದ್ದಾರೆ. ಅವರ ಪೈಕಿ ಮೋಹಕ ತಾರೆ ರಮ್ಯಾ ಕೂಡಾ ಒಬ್ಬರು. ಅವರ ಅಭಿಮಾನಿಗಳು, ತಮ್ಮ ಮನೆ ಮಕ್ಕಳಂತೆ ಮೆಚ್ಚಿನ ನಟಿ ಮದುವೆ ಆಗಿ ಸೆಟಲ್‌ ಅದ್ರೆ ಸಾಕು ಎಂದುಕೊಳ್ಳುತ್ತಿದ್ದಾರೆ. 2 ದಿನಗಳ ಹಿಂದಷ್ಟೇ ರಮ್ಯಾ ಮದುವೆ ಸುದ್ದಿ ಹರಡಿತ್ತು.ಇದನ್ನು ಕೇಳಿ ಅಭಿಮಾನಿಗಳು ಕೂಡಾ ಖುಷಿ ಆಗಿದ್ದರು.

ಉದ್ಯಮಿಯ ಕೈ ಹಿಡಿಯಲಿದ್ದಾರೆ ಎಂಬ ಸುದ್ದಿ ರಮ್ಯಾ ಮದುವೆ ಫಿಕ್ಸ್‌ ಆಗಿದೆ. ಆಕೆ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರೆ. ಕೆಲವೇ ದಿನಗಳಲ್ಲಿ ರಮ್ಯಾ ನಿಶ್ಚಿತಾರ್ಥ ನೆರವೇರುತ್ತದೆ. ನವೆಂಬರ್‌ 29, ಅವರ ಹುಟ್ಟುಹಬ್ಬದ ದಿನವೇ ರಮ್ಯಾ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದನ್ನು ನೋಡಿ ಅಭಿಮಾನಿಗಳಂತೂ ಸಂಭ್ರಮದಿಂದ ಸೋಷಿಯಲ್‌ ಮೀಡಿಯಾ ಜಾಲಾಡತೊಡಗಿದರು. ಹಾಗಾದರೆ ರಮ್ಯಾ ಮದುವೆ ಆಗ್ತಿರುವ ಆ ಹುಡುಗ ಯಾರು? ಆತ ಕೂಡಾ ಸಿನಿಮಾಗೆ ಸಂಬಂಧಿಸಿದವರಾ ಅಥವಾ ಸಿನಿಮಾ ಹೊರಗಿನವರಾ? ರಮ್ಯಾ ಪರಿಚಯವರಾ? ಹೊಸ ಸಂಬಂಧವಾ ಹೀಗೆ ಅನೇಕ ಚರ್ಚೆಗಳು ಕೂಡಾ ಆರಂಭವಾಯ್ತು, ಕೆಲವೊಂದು ಮಾಧ್ಯಮಗಳಲ್ಲಿ ಆ ವ್ಯಕ್ತಿಯ ಫೋಟೋ ಕೂಡಾ ಪ್ರಕಟವಾಗಿತ್ತು.

ಚೌಧರಿ ಗಾರ್ಮೆಂಟ್ಸ್‌ ಓನರ್‌ ಪ್ರಭವ್‌ ಚೌಧರಿ ಅವರನ್ನು ರಮ್ಯಾ ಕೈ ಹಿಡಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ರಮ್ಯಾ ಇದನ್ನು ಮುಂದೆ ರಷ್ಯಾದ ರಫೆಲ್‌ ಎಂಬುವರನ್ನು ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿ ಬ್ರೇಕಪ್‌ ಆಗಿತ್ತು. ಇದಾದ ನಂತರ ಅವರ ಹೆಸರು ಕೆಲವರೊಂದಿಗೆ ಕೇಳಿ ಬಂದಿತ್ತು. ಈ ನಡುವೆ ಈ ಚೆಲುವೆ ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಕೂಡಾ ಮಾಡಿದ್ದರು. ನಿರ್ಮಾಪಕಿಯಾಗಿ ಬಂದ ರಮ್ಯಾ ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಎಂಬ ಪ್ರೊಡಕ್ಷನ್‌ ಕಂಪನಿಯನ್ನು ಆರಂಭಿಸಿ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಸಿನಿಮಾವನ್ನು ನಿರ್ಮಿಸಿದ್ದರು. ಅದರ ಜೊತೆ ಜೊತೆಗೆ ರಮ್ಯಾ ಮದುವೆ ವಿಚಾರ ಕೇಳಿ ಬರುತ್ತಲೇ ಇತ್ತು. ಇದೀಗ ಮೌನ ಮುರಿದಿರುವ ರಮ್ಯಾ, ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಲೆಕ್ಕವಿಲ್ಲದಷ್ಟು ಬಾರಿ ಮದುವೆ ಆಗಿದ್ದೇನೆ ಎಂದ ಮೋಹಕ ತಾರೆ

ಮಾಧ್ಯಮದವರಿಂದ ನಾನು ಈಗಾಗಲೇ ಬಹಳ ಸಾರಿ ಮದುವೆ ಆಗಿದ್ದೇನೆ, ಅದಕ್ಕೆ ಲೆಕ್ಕವೇ ಇಲ್ಲ, ಒಂದು ವೇಳೆ ನಾನು ಮದುವೆ ಆದರೆ ಖಂಡಿತ ಆ ವಿಚಾರವನ್ನು ಹೇಳುತ್ತೇನೆ. ಯಾವುದೋ ಗೊತ್ತಿಲ್ಲದ ಮೂಲಗಳಿಂದ ದೊರೆಯುವ ಮದುವೆ ಸುದ್ದಿಯನ್ನು ಬರೆಯುವುದನ್ನು ದಯವಿಟ್ಟು ನಿಲ್ಲಿಸಿ ಎಂದು ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅದರರ್ಥ, ಈ ಮದುವೆ ಸುದ್ದಿ ಗಾಸಿಪ್‌ ಅಷ್ಟೇ , ನಿಜವಲ್ಲ ಎಂದು ರಮ್ಯಾ ಹೇಳಲು ಹೊರಟಿದ್ದಾರೆ. ಈ ಪೋಸ್ಟ್‌ ನೋಡಿ ಅಭಿಮಾನಿಗಳ ಹೃದಯ ಒಡೆದಿದೆ. ಏನೇ ಆಗಲಿ ನಟಿಯರು ತಮ್ಮ ಮದುವೆ ಸುದ್ದಿಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ರಮ್ಯಾ ಮದುವೆ ಸುದ್ದಿ ಅವರು ಹೇಳಿದಂತೆ ಕೇವಲ ಗಾಳಿಸುದ್ದೀನಾ ಅಥವಾ ನಿಜಾನಾ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

See also  ಟ್ರೈಲರ್ ಬಿಡುಗಡೆ: ಚಂದನವನದಲ್ಲಿ Yours sincerely ರಾಮ್

2003ರಲ್ಲಿ ಅಭಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ರಮ್ಯಾ, ಅನೇಕ ಸಿನಿಮಾಗಳಲ್ಲಿ ನಟಿಸಿದರು. ತೆಲುಗು, ತಮಿಳಿನಲ್ಲಿ ಕೂಡಾ ಕಾಣಿಸಿಕೊಂಡರು. 2016 ರಲ್ಲಿ ನಾಗರಹಾವು ಚಿತ್ರದ ನಂತರ ರಮ್ಯಾ ರಾಜಕೀಯದಲ್ಲಿ ಬ್ಯುಸಿಯಾಗಿ ಚಿತ್ರರಂಗದಿಂದ ದೂರಾದರು. ಈ ಬ್ಯೂಟಿ ಕ್ವೀನ್‌ ಮತ್ತೆ ಚಿತ್ರರಂಗಕ್ಕೆ ಬರಲಿ ಎಂದು ಬಹಳ ಮಂದಿ ಆಸೆ ಪಟ್ಟರು. ಬಹಳ ವರ್ಷಗಳ ನಂತರ ರಮ್ಯಾ ತಾವು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ವಾಪಸ್‌ ಬರುತ್ತಿರುವುದಾಗಿ ಘೋಷಿಸಿದರು. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ನಾಯಕಿಯಾಗಿ ಕೂಡಾ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ನಂತರ ಆ ಜಾಗಕ್ಕೆ ಮತ್ತೊಬ್ಬ ನಟಿಯನ್ನು ಕರೆ ತರಲಾಗಿತ್ತು. ಕಳೆದ ವರ್ಷ ತೆರೆ ಕಂಡ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡದ್ದು ಬಿಟ್ಟರೆ ರಮ್ಯಾ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ.

0 0 votes
Article Rating
Subscribe
Notify of
guest
0 Comments
Inline Feedbacks
View all comments