50 ಕೋಟಿ ಹಣಕ್ಕೆ ಬೇಡಿಕೆ, ಕುಮಾರಸ್ವಾಮಿ ವಿರುದ್ಧ ದೂರು!

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ನಾಯಕರ ವಿರುದ್ಧ ಹಗರಣ ಆರೋಪ, ದೂರು, ಕೇಸ್​ಗಳಂತ ಘಟನೆಗಳು ಮುಂದುವರೆದಿದ್ದು, ಇದೀಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಐವತ್ತು ಕೋಟಿ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿರುವ ಆರೋಪ ಹೊರಿಸಿ, ಮಾಜಿ ಮುಖ್ಯಮಂತ್ರಿ (Former Chief Minister) ಹಾಗೂ ಕೇಂದ್ರ ಸಚಿವ (Union Minister) ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಉದ್ಯಮಿ ವಿಜಯ್ ಟಾಟಾ ಅವರು ಈ ದೂರು ನೀಡಿದ್ದು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಐವತ್ತು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. 2018 ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿರುವ ವಿಜಯ ಟಾಟಾ, ಹೆಚ್.ಡಿ.ದೇವೆಗೌಡರು ಪಕ್ಷದ ಸೋಷಿಯಲ್‌ಮೀಡಿಯಾ ಉಪಾಧ್ಯಕ್ಷನಾಗಿ ನನ್ನನ್ನು ನೇಮಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯ್ ಟಾಟಾ ಯಾರು?

ವಿಜಯ್ ಟಾಟಾ ಅವರು ನಾನು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದೇನೆ. 2018 ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಹೆಚ್.ಡಿ.ದೇವೆಗೌಡರು ಪಕ್ಷದ ಸೋಷಿಯಲ್‌ಮೀಡಿಯಾ ಉಪಾಧ್ಯಕ್ಷನಾಗಿ ನನ್ನನ್ನು ನೇಮಿಸಿದ್ದರು. 2019ರ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ಪರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಯಾನ ನಡೆಸಿದ್ದೇನೆ. ಕಳೆದ ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದ ಬಗ್ಗೆ ಗಮನಹರಿಸಿದ್ದೆ. ಪಕ್ಷದ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಏನಿದು ಆರೋಪ?

2024ರ ಆಗಸ್ಟ್ 24 ರಂದು ರಮೇಶ್ ಗೌಡ ನನ್ನ ನಿವಾಸಕ್ಕೆ ಆಗಮಿಸಿದ್ದರು. ನನ್ನ ಮನೆಯಲ್ಲೇ ಜೊತೆಯಲ್ಲಿ ಊಟ ಮಾಡುತ್ತ ಚೆನ್ನಪಟ್ಟಣ ಚುನಾವಣೆ ಬಗ್ಗೆ ರಮೇಶ್ ಗೌಡ ವಿವರಿಸಿದರು. ನಿಖಿಲ್ ಕುಮಾರಸ್ವಾಮಿ ಅವರಿಗೆ ಚೆನ್ನಪಟ್ಟಣ ಚುನಾವಣೆಗೆ ಟಿಕೆಟ್ ನೀಡುವುದು ಅಂತಿಮವಾಗಿದೆ ಅಂತ ಹೇಳಿದ್ರು. ಇದೇ ವೇಳೆ ಕುಮಾರಸ್ವಾಮಿ ಫೋನ್ ಮಾಡಿ, ನಿಖಿಲ್ ಚನ್ನಪಟ್ಟಣ ಚುನಾವಣೆಗೆ ನಿಲ್ತಿದ್ದಾರೆ, ಚುನಾವಣೆಗೆ ಐವತ್ತು ಕೋಟಿ ಕೊಡಿ ಅಂದ್ರು. ಈ ವೇಳೆ ಆಗಲ್ಲ ಸರ್ ಅಂತ ಹೇಳಿದೆ. ಅದಕ್ಕೆ ಕುಮಾರಸ್ವಾಮಿ ಕೋಪ ಮಾಡಿಕೊಂಡು, ನೀವು ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ನಡೆಸೋದಷ್ಟೇ ಅಲ್ಲ ಬದುಕುವುದೇ ಕಷ್ಟವಾಗತ್ತೆ ಎಂದು ಬೆದರಿಕೆ ಹಾಕಿ ಫೋನ್ ಕಟ್ ಮಾಡಿದ್ರು. ನಿಮ್ಮ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಕಂಪ್ಲೀಟ್ ಮಾಡಲಿಕ್ಕೆ ಬಿಡೊದಿಲ್ಲ ಎಂದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘₹5 ಕೋಟಿಗೆ ರಮೇಶ್ ಗೌಡ ಡಿಮ್ಯಾಂಡ್’

ಕುಮಾರಸ್ವಾಮಿ ಜೊತೆ ಫೋನ್​​ನಲ್ಲಿ ಮಾತಾಡುವ ವೇಳೆ ರಮೇಶ್ ಗೌಡ ಎದುರಲ್ಲಿ ಕುಳಿತಿದ್ರು. ಈ ವೇಳೆ ರಮೇಶ್ ಗೌಡ ಕೂಡ ಐದು ಕೋಟಿ ರೂಪಾಯಿ ಕೇಳಿದ್ರು. ದೇವಾಲಯ ಹಾಗೂ ಶಾಲೆ ಕಟ್ಟಿಸುತ್ತಿದ್ದು ಅದಕ್ಕಾಗಿ ಐದು ಕೋಟಿ ಕೊಡಿ ಅಂತ ರಮೇಶ್ ಗೌಡ ಕೇಳಿದ್ರು, ತುಂಬಾ ಕಷ್ಟ ಇದೆ ಯಾವುದೇ ಕಾರಣಕ್ಕೂ ಆಗಲ್ಲ ಅಂತ ಹೇಳಿದೆ ಎಂದು ವಿಜಯ್ ಟಾಟಾ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

See also  ಮುಡಾ ಹಗರಣವನ್ನು 'CBI ತನಿಖೆ'ಗೆ ವರ್ಗಾಯಿಸುವಂತೆ ಕೋರಿ 'ಹೈಕೋರ್ಟ್'ಗೆ ಅರ್ಜಿ ಸಲ್ಲಿಕೆ | 

ವಿಜಯ್ ಟಾಟಾ ಹೇಳಿದ್ದೇನು? ಇನ್ನು ದೂರು ನೀಡಿದ ಬಳಿಕ ಮಾತನಾಡಿರುವ ವಿಜಯ್ ಟಾಟಾ, ‘ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ವಿರುದ್ದ ದೂರು ನೀಡಿದ್ದೇವೆ. ರಮೇಶ್ ಗೌಡ ಮನೆಗೆ ಬಂದು ನಿಖಿಲ್ ಚನ್ನಪಟ್ಟಣ ಚುನಾವಣೆಗೆ ನಿಲ್ತಿದ್ದಾರೆ ಎಂದರು. ಈ ವೇಳೆ ಕುಮಾರಸ್ವಾಮಿ ಪೋನ್ ಮಾಡಿ ಚುನಾವಣೆಗೆ ಐವತ್ತು ಕೋಟಿ ಕೊಡಿ ಎಂದ್ರು. ಆಗಲ್ಲ ಎಂದಿದ್ದಕ್ಕೆ ಕುಮಾರಸ್ವಾಮಿ ಕೋಪ ಮಾಡಿಕೊಂಡು ನಿಮ್ಮ ಪ್ರಾಜೆಕ್ಟ್ ಕಂಪ್ಲೀಟ್ ಮಾಡಲಿಕ್ಕೆ ಬಿಡೊಲ್ಲ ಅಂದ್ರು. ರಮೇಶ್ ಗೌಡ ಕೂಡ ಐದು ಕೋಟಿ ಕೇಳಿದ್ರು. ತುಂಬಾ ಕಷ್ಟ ಇದೆ ಯಾವುದೇ ಕಾರಣಕ್ಕೂ ಆಗಲ್ಲ ಅಂತ ಹೇಳಿದೆ. ನನ್ನನ್ನು ಬ್ಲಾಕ್ ಮೇಲ್ ಮಾಡಿಲ್ಲ, ಡಿಮ್ಯಾಂಡ್ ಮಾಡಿದ್ದಾರೆ. ರಮೇಶ್ ಗೌಡ ಒಂದು ವಾರದಿಂದ ಮೆಸೇಜ್ ಕಾಲ್ ಮಾಡುವ ಕೆಲಸ ಮಾಡುತ್ತಿದ್ರು 2019ರ ಚುನಾವಣೆಗೆ ಅವರಿಗಾಗಿ ತುಂಬಾ ಖರ್ಚು ಮಾಡಿದ್ದೀವಿ’ ಎಂದು ಹೇಳಿದ್ದಾರೆ.

0 0 votes
Article Rating
Subscribe
Notify of
guest
0 Comments
Inline Feedbacks
View all comments