ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಬೆಂಗಳೂರು: ಆರು ವಿಮಾನಗಳಲ್ಲಿ 12 ಜನ ಬಾಂಬರ್‌ಗಳು ಇರುವುದಾಗಿ ಎಕ್ಸ್ (ಟ್ವಿಟರ್) (X) ಖಾತೆ ಮೂಲಕ‌ ಬೆಂಗಳೂರಿನ (Bangalore) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಏರ್‌ಪೋರ್ಟ್ ಕಮಾಂಡ್ ಸೆಂಟರ್ಗೆ (Command center of the airport) ಇಂದು ಬಾಂಬ್ ಬೆದರಿಕೆಯ (Bomb threat) ಸಂದೇಶ ಬಂದಿದೆ.

ಮಂಗಳೂರು, ದುಬೈ, ತಿರುವನಂತಪುರಂ, ಮಸ್ಕಟ್ ಸೇರಿದಂತೆ ದೇಶದ ವಿವಿದ ಏರ್‌ಪೋರ್ಟ್ ಗಳಿಂದ‌ ತೆರಳುವ ವಿಮಾನಗಳಲ್ಲಿ ಬಾಂಬರ್‌ಗಳು ಇರುವುದಾಗಿ ಸಂದೇಶದಲ್ಲಿದೆ.

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿರುವ ಸಂದೇಶದಲ್ಲಿ ಇಂಡಿಗೋ ಸಂಸ್ಥೆಯ IX233, IX 375, IX 481, IX 383, IX 549, IX 399 ಆರು ವಿಮಾನಗಳಲ್ಲಿ ತಲಾ ಇಬ್ಬರು ಬಾಂಬರ್‌ಗಳು ಇರುವುದಾಗಿ ತಿಳಿಸಲಾಗಿದೆ. ಅನಾಮದೇಯ ಟ್ವಿಟರ್ ಖಾತೆಯಿಂದ ಈ ಸಂದೇಶ ರವಾನೆಯಾಗಿದ್ದು, ಕಳೆದ ಒಂದು ವಾರದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಎರಡನೆ ಬಾರಿಗೆ ಹುಸಿ ಬಾಂಬ್ ಸಂದೇಶ ಬಂದಿದ್ದು, ಬಾಂಬ್ ಸಂದೇಶ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಅಧಿಕಾರಿ ಮತ್ತು ಭದ್ರತಾ ಪಡೆಗಳು ಅಲರ್ಟ್ ಆಗಿದ್ದಾರೆ.

ಆದರೆ, ಎಕ್ಸ್ (ಟ್ವಿಟರ್) ಖಾತೆ ಮೂಲಕ‌ ಬಂದಿರುವ ಸಂದೇಶದಲ್ಲಿ ಕೆಂಪೇಗೌಡ ಏರ್‌ಪೋರ್ಟ್ ನಿಂದ ತೆರಳುವ ವಿಮಾನಗಳು ಯಾವುದು ಇಲ್ಲ ಎನ್ನಲಾಗಿದೆ.

See also  ಮಣಿಪುರ | ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ: ಐದು ದಿನ ಇಂಟರ್‌ನೆಟ್‌ ಸೇವೆ ಸ್ಥಗಿತ
0 0 votes
Article Rating
Subscribe
Notify of
guest
0 Comments
Inline Feedbacks
View all comments