ಬೆಂಗಳೂರು, (ಅಕ್ಟೋಬರ್ 20): ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಕಗ್ಗಂಟಾಗಿದೆ.. ಸಿ.ಪಿ.ಯೋಗೇಶ್ವರ್ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದು, ಜೆಡಿಎಸ್ಗೆ ನುಂಗಲಾರದ ತುತ್ತಾಗಿದೆ.. ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾತು ಕೇಳಿ ಬರುತ್ತಿದೆಯಾದರೂ, ಸೈನಿಕನ ಹಠವೇ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.. ಈಗಾಗಲೇ ಹಲವು ಸಭೆ ನಡೆದಿದ್ದು, ಜೆಡಿಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಜೆಡಿಎಸ್ ಚಿನ್ಹೆಯಡಿ ಯೋಗೇಶ್ವರ್ ಸ್ಪರ್ಧಿಸುವುದು ಬಹುತೇಕ ಖಚಿತ ಎಂಬ ಮಾಹಿತಿ ಮೂಲಗಳಿಂದ ದೂರಕಿದೆ..
ಇದಕ್ಕೆ ಪೂರಕವಾಗಿ ನಿಖಿಲ್ ಕುಮಾರಸ್ವಾಮಿ ತ್ಯಾಗದ ಮಾತನಾಡಿದ್ದಾರೆ.. ಇನ್ನು, ಪ್ರೀತಿ, ವಿಶ್ವಾಸದಿಂದ ಎಲೆಕ್ಷನ್ ನಡೆಯಬೇಕು ಅಂತ ಹೆಚ್ಡಿಕೆ ಹೇಳಿದ್ರೆ, ಯೋಗೇಶ್ವರ್ಗೆ ಅನ್ಯಾಯ ಆಗ್ಬಾರದು ಅಂತ ಸೈನಿಕನ ಪರ ವಿಜಯೇಂದ್ರ ಬ್ಯಾಟಿಂಗ್ ಮಾಡಿದ್ದಾರೆ.