ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು

ಮೈಸೂರು: ದಸರಾ ಉದ್ಘಾಟಕರಾದಿಯಾಗಿ ಎಲ್ಲರೂ ಚಮಚಗಿರಿ ಭಾಷಣ ಮಾಡುವ ಮೂಲಕ ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆಯನ್ನೇ ಹಾಳು ಮಾಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಪಾವಿತ್ರ್ಯತೆ ಇದೆ.

ಆದರೆ ಇದೆಲ್ಲವನ್ನೂ ಗುರುವಾರ ನಡೆದ ದಸರಾ ಉದ್ಘಾಟನಾ ಕಾರ್ಯಕ್ರಮ ನುಂಗಿ ಹಾಕಿದೆ.

ಎಲ್ಲರೂ ರಾಜಕೀಯ ಭಾಷಣ ಮಾಡಿ ಇಡೀ ವೇದಿಕೆಯನ್ನು ರಾಜಕೀಯಮವಾಗಿಸಿ ಹೊಲಸೆಬ್ಬಿಸಿದರು. ದಸರಾ ಉದ್ಘಾಟಕ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ರಾಜಕೀಯ ಮಾತನಾಡಿ ವೇದಿಕೆಯ ಮಹತ್ವ ಹಾಳುಗೆಡವಿದ್ದಾರೆ ಎಂದು ದೂರಿದರು.

See also  ಹಿಂಸಾಚಾರದಿಂದ ಬೀದಿಗೆ ಬಿದ್ದ ನಾಗಮಂಗಲದ ವ್ಯಾಪಾರಿಗಳ ಬದುಕು
0 0 votes
Article Rating
Subscribe
Notify of
guest
0 Comments
Inline Feedbacks
View all comments