ಲಾಲ್ ಸಲಾಂ ಡಿಯರ್ Comrade

ಸೀತಾರಾಮ್ ಯೆಚೂರಿ ನಿಧನ ವಾರ್ತೆ ಕುರಿತಾದ ಬರಹ

By: Suman Babu

ಇಂತಹದ್ದೊಂದು ವಿಷಯಕ್ಕೆ ಸುದ್ದಿ ಬರೆಯುವ ಸಮಯ ಇಷ್ಟು ಬೇಗ ಬರುತ್ತದೆ ಎಂದು ಊಹಿಸಿರಲಿಲ್ಲ. ಆದರೂ ಮೈ- ಕೈ ನಡುಗುತ್ತಿದೆ. ಪಾಪ ಈ ಹಿರಿ ಜೀವ, ನಮ್ಮ ನೆಲದ ಶೋಷಿತರ, ನಿರ್ಗತಿಕರ ಜೀವನ ಹಸನು ಮಾಡಲು. ಜೀವನದ ಕೊನೆಯವರೆಗೂ ವಿರೋಧಪಕ್ಷದ ಸ್ಥಾನದ ರಾಜ್ಯಸಭೆಯ ಅಂಗಳದಲ್ಲಿ ಅದೆಷ್ಟು ಸೆಣೆಸಾಡುತ್ತಿದ್ದರು. ಅವರ ಸೈದ್ಧಾಂತಿಕ ನಿಲುವು, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅಪಾರವಾದ ಜ್ಞಾನದ ಜೊತೆಗೆ ಇಂಗ್ಲಿಷ್- ಹಿಂದಿ ಭಾಷೆಯಲ್ಲಿನ ಸ್ಪಷ್ಟತೆ ಮತ್ತು ಹಿಡಿತ ಮತ್ತು ಇದನ್ನು ಬಳಸುತ್ತಿದ್ದ ರೀತಿ ಈಗಿನ ಸಂಸದೀಯಪಟುಗಳಿಗೆ ಮಾದರಿಯಾಗಬೇಕು.

ವಯಕ್ತಿಕವಾಗಿ ಈ ಮನುಷ್ಯ ನನ್ನ ಗಮನ ಸೆಳೆದಿದ್ದು, 2014 ರ ಚುನಾವಣೆ ನಂತರದ ರಾಜ್ಯಸಭೆ ನೇರ ಕಲಾಪದಲ್ಲಿ. ವಿಶೇಷವಾಗಿ 500 ಮತ್ತು 1000 ರ ನೋಟು ರದ್ದತಿ, GST ಕಾಯ್ದೆ, NRC ಯಂತಹ ಭಯಾನಕ ಕಾಯ್ದೆಗಳ ಕುರಿತು ಅವರು ವಿರೋಧಿಸಿ, ಮಂಡಿಸುತ್ತಿದ್ದ ರೀತಿ ಮತ್ತು ಈ ವಿಷಯದ ಆಳ-ಅಗಲವನ್ನು ಅಂದಾಜುಮಾಡಿ ಅರ್ಥ ಮಾಡಿಕೊಂಡಾಗ ನನಗೆ ಸ್ಪಷ್ಟವಾಗಿ ಅರ್ಥವಾಗಿದ್ದು, ಇವರಿಗೆ ನಮ್ಮ ದೇಶದ ಬಗ್ಗೆ ಇರುವ ನಿಲುವು ಏನು ಎಂಬುದು. ನಂತರ ಇವರನ್ನು ನಿರಂತರವಾಗಿ ರಾಜ್ಯಸಭೆಯ
ಒಳಗೂ-ಹೊರಗೂ ಹಿಂಬಾಲಿಸುತ್ತಾ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಆರಂಭಿಸಿದಾಗ ನನಗೆ ತೋಚಿದ್ದು ಮಾತ್ರ, ಇವರಂತೆ ಮಾನಸಿಕವಾಗಿ ಬದುಕಿದರೆ ಸಾಕು ನಿಜಕ್ಕೂ ಈ ನಾಡಿನ ಉತ್ತಮ ನಾಗರಿಕನಾಗಲು ಸಾಧ್ಯ ಎನ್ನುವ ನಿಲುವು ನನ್ನಂತಹ ಅನೇಕ ಯುವಕರಿಗೆ ಅನಿಸಿದ್ದಿರಬಹುದು. ಕಾರಣ ಅವರಿಲ್ಲಿದ್ದ ನಾಗರಿಕತೆಯ ಮೌಲ್ಯಗಳು ಹಾಗೆ ಇದ್ದವು.

ಮೂಲತಃ ಕಾರ್ಲ್ ಮಾರ್ಕ್ಸ್ ಸಿದ್ದಾಂತವನ್ನು ಮೈಗೂಡಿಸಿಕೊಂಡಿದ್ದ ಇವರು, ಬದುಕಿನುದ್ದಕ್ಕೂ ಎಲ್ಲಿಯೂ ರಾಜಿಯಾಗದೆ ತಾನು ನಂಬಿದ ಸಿದ್ದಾಂತವನ್ನು ಪ್ರತಿಪಾದಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಇಲ್ಲಿಯವರೆಗೆ ಒಂದು ಕಪ್ಪು ಚುಕ್ಕೆ ಇಲ್ಲದೆ ಇಂಡಿಯಾದ ಕಾರ್ಲ್ ಮಾರ್ಕ್ಸ್ ಆಗಿದ್ದರು ಎಂದರೆ ತಪ್ಪಾಗಲಾರದು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವಕ್ಕೆ ಅನುಗುಣವಾಗಿ. ಕೇಂದ್ರ ಸರ್ಕಾರದೊಂದಿಗಿನ ಹಲವು ಯೋಜನೆಗಳ ಜೊತೆ ಕೆಲಸ ಮಾಡುತ್ತಾ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಆಧಾರ್ ಕಾರ್ಡ್ ಗೆ ಚಾಲನೆ, ಆಹಾರ ಭದ್ರತಾ ಖಾಯ್ದೆಯ ರೂಪದಲ್ಲಿ ಸಾರ್ವಜನಿಕರಿಗೆ ತಲುಪಲು ಕಾರಣೀಬೂತರಾಗಿದ್ದರು.

ಇತ್ತೀಚಿಗೆ ಇವರ ಜಿ-ಮೇಲ್ ಖಾತೆ ಹ್ಯಾಕ್ ಮಾಡಲಾಗಿತ್ತು. ಇದಕ್ಕೆ ಅವರ ಸಹಜ ಪ್ರತಿಕ್ರಿಯೆ ಹೇಗಿತ್ತೆಂದರೆ, ಇದರ ಸಹಾಯದಿಂದಾರೂ ಉತ್ತಮ ರೀತಿಯ ಭಾಷೆಯನ್ನು ಕಲಿಯಲು ಸಾದ್ಯವಾಗಲಿ ಎಂದು ಹಾರೈಸಿದ್ದರು. ಇಂತಹ ಪ್ರೌಡಮೆ ಇರುವ ರಾಜಕೀಯ ಮುತ್ಸದ್ದಿಯನ್ನು ಅದರಲ್ಲೂ ಇಂತಹ ಕೆಟ್ಟ ರಾಜಕೀಯ ಸನ್ನಿವೇಶದಲ್ಲಿ ಕಳೆದುಕೊಂಡಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಮೂಲಭೂತವಾಗಿ ನಿಮಗೆ ವಿದಾಯ ಹೇಳಿ ಗೌರವ ಸಲ್ಲಿಸಿ, ಕೈ ತೊಳೆದುಕೊಳ್ಳಲಾರೆ ಡಿಯರ್ Comrade ನನ್ನೊಳಗೆ ನಿಮ್ಮ ಆಶಯಗಳನ್ನು ಹೊತ್ತು ಸಾಗುವೆ. ಈ ವಿಷಯದಲ್ಲಿ ನಿಮ್ಮ ಆಶೀರ್ವಾದ ಇರಲಿ ಎಂದರೆ, ಅಪ್ರಾಯೋಗಿಕ ಮತ್ತು ಮೂಢನಂಬಿಕೆ ಆಗುತ್ತದೆ. ಏನೇ ಇರಲಿ ನಿಮ್ಮ ಬದುಕಿಗೊಂದು ಲಾಲ್ ಸಲಾಂ

See also  ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು
4.5 2 votes
Article Rating
Subscribe
Notify of
guest
0 Comments
Inline Feedbacks
View all comments