ಲಾಡು ಎಫೆಕ್ಟ್ – ತಿರುಪತಿ ಖಾಲಿ ಖಾಲಿ

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆ ಬೆನ್ನಲ್ಲೇ ತಿರುಪತಿ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಕೆ ಆಗಿದೆ. ರಜಾ ದಿನವಾದ ಭಾನುವಾರ ಇಂದು ಭಕ್ತರ ಸಂಖ್ಯೆ ಜಾಸ್ತಿ ಇರಬೇಕಿತ್ತು. ಆದರೆ ಈ ವಿಚಾರ ಬಯಲಾಗುತ್ತಿದ್ದಂತೆ ಭಕ್ತರು ದೇವಸ್ಥಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ದೇವಸ್ಥಾನದ ಲಡ್ಡು ಕೌಂಟರ್‌ ಖಾಲಿ ಹೊಡೆಯುತ್ತಿದ್ದು, ದೇವಸ್ಥಾನಕ್ಕೆ ಬಂದ ಕೆಲ ಭಕ್ತರು ದೇವರ ದರ್ಶನ ಮುಗಿಸಿ ಹಾಗೇ ವಾಪಸ್ಸಾಗುತ್ತಿದ್ದಾರೆ. ಇನ್ನು ಲಡ್ಡು ಪ್ರಸಾದ ಅಪವಿತ್ರವಾಗಿರುವ ವಿಚಾರದ ಬೆನ್ನಲ್ಲೇ ಆಂಧ್ರ ಸಿಎಂ…

Read More

ತಿರುಪತಿ ಲಡ್ಡು ವಿವಾದ: ಪವನ್​ ಕಲ್ಯಾಣ್​ಗೆ ಪ್ರಕಾಶ್ ರಾಜ್ ಟಾಂಗ್

ಅಮರಾವತಿ: ಕೋಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ತಿರುಪತಿಯ ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಹಾಗೂ ಪ್ರಾಣಿಗಳ ಕೊಬ್ಬು ಬಳಕೆ ಆಗುತ್ತಿತ್ತೆಂಬ ವಿಚಾರ ಬೆಳಕಿಗೆ ಬಂದಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ನಡೆದಿತ್ತೆನ್ನಲಾದ ಈ ಪ್ರಮಾದವನ್ನು ಸತ್ಯ ಎಂದು ಗುಜರಾತ್​ನ ಪ್ರಯೋಗಾಲಯ ದೃಢಪಡಿಸಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಎಲ್ಲೆಡೆ ಚರ್ಚೆ ಜೋರಾಗಿ ನಡೆಯುತ್ತಿದೆ. ತಿರುಮಲ ಲಡ್ಡು ವಿವಾದದ ಬಗ್ಗೆ ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರದ ಉಪ…

Read More

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿ ಕೊಬ್ಬು ಬಳಕೆ ಆರೋಪ: ತುಪ್ಪದ ಗುಣಮಟ್ಟ ಪರೀಕ್ಷೆಗೆ ಸಮಿತಿ ರಚನೆ

ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ತನಿಖಾ ವರದಿಯಲ್ಲೂ ಇದು ದೃಢಪಟ್ಟಿದ್ದು ತುಪ್ಪದ ಗುಣಮಟ್ಟವನ್ನು ಪರೀಕ್ಷೆ ಮಾಡಲು ಸಮಿತಿಯೊಂದನ್ನು ಟಿಟಿಡಿ ಸ್ಥಾಪಿಸಿದೆ. ನಾಲ್ಕು ತಜ್ಞರನ್ನು ಈ ಸಮಿತಿ ಒಳಗೊಂಡಿದೆ. ಡಾ. ಸ್ವರ್ಣಲತಾ, ಡಾ. ವಿಜಯ್ ಭಾಸ್ಕರ್ ರೆಡ್ಡಿ, ಡಾ.ಮಹದೇವನ್ ಹಾಗೂ ಡಾ. ಸುರೇಂದ್ರನಾಥ್ ಅವರನ್ನೊಳಗೊಂಡಂತೆ ಸಮಿತಿಯನ್ನು ರಚಿಸಲಾಗಿದ್ದು ಇವರು ತುಪ್ಪದ ಗುಣಮಟ್ಟವನ್ನು ಪರಿಶೀಲನೆ ನಡೆಸಲಿದ್ದಾರೆ. ಒಂದು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆ…

Read More