‘ಹಿರಿಯ ನಾಗರೀಕ’ರಿಗೆ ಸಿಹಿಸುದ್ದಿ: ‘ವೃದ್ಧಾಪ್ಯ ವೇತನ’ ಹೆಚ್ಚಳ – ಸಿಎಂ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಮಾಸಾಶನ (ವೃದ್ಧಾಪ್ಯ ವೇತನ) ನೀಡಲಾಗುತ್ತಿದೆ. ಅವರ ಮಾಸಾಶನ ಹೆಚ್ಚಳದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಹಿರಿಯ ನಾಗರೀಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹಿರಿಯರು ಮಾಡಿದ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಬೇಕು. ಹಿರಿಯರ ನಾಗರಿಕರನ್ನು ಕೇವಲ ಗೌರವಿಸಲಷ್ಟೇ ಮೀಸಲಿರಿಸಬಾರದು, ಅವರ ಸಾಧನೆಗಳು ಯುವ ಸಮುದಾಯಕ್ಕೆ ಸ್ಪೂರ್ತಿಯಾಗಬೇಕು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದೇ ನಾವು ಸಮಾಜಕ್ಕೆ ಕೊಡುವ ದೊಡ್ಡ…