ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತಕ್ಕೆ ಶರಣಾದ ಜಪಾನ್
ಹುಲುನ್‌ಬೈರ್, ಚೀನಾ: ಸುಖಜೀತ್ ಸಿಂಗ್ ಅವರ ಅಮೋಘ ಆಟದ ಬಲದಿಂದ ಹಾಲಿ ಚಾಂಪಿಯನ್ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಜಪಾನ್ ವಿರುದ್ಧ ಜಯಗಳಿಸಿತು. ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಸುಖಜೀತ್ (2ನೇ ಹಾಗೂ 60ನೇ ನಿಮಿಷ) ಹೊಡೆದ ಗೋಲುಗಳಿಂದಾಗಿ ಭಾರತ ತಂಡವು 5-1ರಿಂದ ಜಪಾನ್ ಎದುರು ಗೆದ್ದಿತು.ಭಾರತದ ಅಭಿಷೇಕ್ (3ನಿ), ಸಂಜಯ್ (17ನಿ) ಮತ್ತು ಉತ್ತಮ್ ಸಿಂಗ್ (54 ನಿ) ಅವರು ತಲಾ ಒಂದು ಗೋಲು ಕಾಣಿಕೆ ನೀಡಿದರು.ಜಪಾನ್ ತಂಡದ ಮಾತ್ಸುಮೊಟೊ ಕಝುಮಾಸಾ…