ಬೆಂಗಳೂರು, ಸೆಪ್ಟಂಬರ್ 11: ಬೆಂಗಳೂರಿನ ನಾನಾ ಕಡೆಗಳಲ್ಲಿ ಅದ್ಧೂರಿ ಗಣೇಶ ಪ್ರತಿಷ್ಠಾಪನೆ ನಡೆದಿತ್ತು. ಇಂದು ಸೆಪ್ಟಂಬರ್ 11ರಂದು ಬುಧವಾರ ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಟ್ಯಾನರಿ ರಸ್ತೆ ಮೂಲಕ ಗಣಪತಿ ಮೂರ್ತಿಗಳ ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.
ಹೀಗಾಗಿ ಸವಾರರ ಹಿತದೃಷ್ಟಿಯಿಂದ ಇಂದು ಮಧ್ಯಾಹ್ನದಿಂದ ರಾತ್ರಿ 1:00 ಗಂಟೆಯವರೆಗೆ ನಗರದ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಪರ್ಯಾಯ ರಸ್ತೆಗಳಿಗೆ ವ್ಯವಸ್ಥೆ ಮಾಡಲಾಗಿದೆ.
ಯಾವೆಲ್ಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
* ನಾಗವಾರ ಮುಖ್ಯ ರಸ್ತೆ ಮತ್ತು ಟ್ಯಾನರಿ / ಡೇವಿಸ್ ರೋಡ್ ಮುಖ್ಯ ರಸ್ತೆ,
* ನೇತಾಜಿ ಜಂಕ್ಷನ್ ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರಕ್ಕೆ ನಿರ್ಬಂಧ ಇದೆ.
* ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿದೆ.
* ರೋಜರ್ ರಸ್ತೆ, ಆರ್ಮ್ ಸ್ಟ್ರಾಂಗ್ ರಸ್ತೆ ಹಾಗೂ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರಕ್ಕೆ ಅವಕಾಶ ಇಲ್ಲ.
* ಮಾಸ್ಕ್ ಜಂಕ್ಷನ್ ನಿಂದ ಕ್ಲಾರೆನ್ಸ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರ ನಿಷೇಧಗೊಂಡಿದೆ.
* ಲಾಜರ್ ರಸ್ತೆ ಮತ್ತು ಎಂ.ಎಂ. ರಸ್ತೆ ಜಂಕ್ಷನ್ ನಿಂದ ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಬುಡ್ ವಿಹಾರಕ್ಕೆ ಹೋಗುವ ಮೂಲಕ ಸಂಚಾರವನ್ನು ನಿರ್ಬಂಧಿಸಲಾಗಿದೆ.
* ಸಿಂಧಿ ಕಾಲೋನಿ ಜಂಕ್ಷನ್ನಿಂದ ಮೆಮೋರಿಯಲ್ ಜಂಕ್ಷನ್ ಕಡೆಗೆ ಅಸ್ಸಾಯೇ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ಬದಲಾಯಿಸಲಾಗಿದೆ, ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.