ರಾಜ್ಯದ ಹಿರಿಯ ಮತ್ತು ಮುತ್ಸದ್ದಿ ರಾಜಕೀಯ ನಾಯಕರಾಗಿದ್ದ ಕೆ ಎಚ್ ಶ್ರೀನಿವಾಸ್ ಇಂದು ಕೊನೆಯುಸಿರೆಳೆದ್ದಿದ್ದಾರೆ. ಈ ಕುರಿತ ಮಾಹಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದೆ .
ರಾಜಕಾರಣಿಯಾಗಿ ಅಷ್ಟೇ ಅಲ್ಲದೆ ತಮ್ಮನ್ನು ಲೇಖಕ , ಕವಿ , ಅನುವಾದರಾಗಿಯೂ ಶ್ರೀನಿವಾಸ್ ಗುರುತಿಸಿಕೊಂಡಿದ್ದರು. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರಾಗಿದ್ದ ಇವರು ಅಲ್ಲಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿದರು . ಅಷ್ಟೇ ಅಲ್ಲದೆ ದೇವರಾಜ್ ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದರು , ತಮ್ಮ ವರ್ಣರಂಜಿತ ರಾಜಕೀಯ ಬದುಕಿನಲ್ಲಿ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ನೊಂದಿಗೂ ಗುರುತಿಸಿಕೊಂಡಿದ್ದರು , ಜೆಡಿಎಸ್ ನಿಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದರು . ಸಾಹಿತ್ಯಿಕ ಲೋಕದ ನಂಟು ಹೊಂದಿದ್ದ ಇವರು ಪಿ ಲಂಕೇಶ್ ಮತ್ತು ಯು ಆರ್ ಅನಂತಮೂರ್ತಿ ಅವರ ನಿಕಟ ಒಡನಾಡಿಯಾಗಿದ್ದರು.